Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಹಿಂದೂ ದೇವರಿಗೆ ಅವಮಾನ: ಕಾಣಿಕೆ ಹುಂಡಿಗೆ ಅಸಭ್ಯವಾಗಿ ಬರೆದ ಖೋಟಾ ನೋಟು, ಬಳಸಿದ...

ಮಂಗಳೂರಿನಲ್ಲಿ ಹಿಂದೂ ದೇವರಿಗೆ ಅವಮಾನ: ಕಾಣಿಕೆ ಹುಂಡಿಗೆ ಅಸಭ್ಯವಾಗಿ ಬರೆದ ಖೋಟಾ ನೋಟು, ಬಳಸಿದ ಕಾಂಡೋಮ್ ಹಾಕಿದ ಪಾಪಿಗಳು

- Advertisement -
- Advertisement -

ಮಂಗಳೂರು: ನಗರದ ಹೊರವಲಯದ  ಕೊಟ್ಟಾರ ಚೌಕಿ ಬಳಿ ಇರುವ ಕಲ್ಲುರ್ಟಿ,ಪಂಜುರ್ಲಿ, ಹಾಗೂ ಅತ್ತಾವರ ಸನಿಹದ ಕೋಟೆದ ಬಬ್ಬುಸ್ವಾಮಿ ದೇವಸ್ಥಾದಲ್ಲಿ ಪಾಪಿಗಳು ವಿಕೃತಿ ಮೆರೆದಿದ್ದಾರೆ.

ದೈವಸ್ಥಾದ ಕಾಣಿಕೆ ಡಬ್ಬಿಗೆ ವಿಕೃತ ಮನಸ್ಥಿತಿಯ ವ್ಯಕ್ತಿಗಳು 200, 20, 10 ರುಪಾಯಿ ನೋಟಿನಲ್ಲಿ ಅಸಭ್ಯ ಬರಹಗಳನ್ನು ಬರೆದು ಕಾಣಿಕೆ ಡಬ್ಬಿಗೆ ಹಾಕಿದ್ದಾರೆ. ಅಲ್ಲದೇ ದುರುಳರು ಕಾಂಡೋಮ್ ನ್ನು ಕೂಡ ಕಾಣಿಕೆ ಡಬ್ಬಿಗೆ ಹಾಕಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೇ ಕಾಣಿಕೆ ಡಬ್ಬಿಯಲ್ಲಿ ಹಿಂದೂ ದೇವರುಗಳನ್ನು ನಿಂದಿಸಿ ಬರೆದಿರುವ ಸುಧೀರ್ಘ ಪತ್ರವೊಂದು ಸಿಕ್ಕಿದೆ.ಅಲ್ಲದೇ ನೋಟುಗಳ ಮೇಲೆ ಯೇಸು ಕ್ರಿಸ್ತ ಮಾತ್ರ ದೇವರು.ಹಂದಿಗಳಂತಿರುವ ಹಿಂದೂಗಳು ಮುಸಲ್ಮಾನರ ಕೈಯಲ್ಲಿ ಸಿಲುಕಿ ಹಾಕಿಕೊಂಡಿದ್ದೀರಿ.ಮುಸಲ್ಮಾರನ್ನು, ಹಂದಿಗಳಂತಿರುವ ಹಿಂದೂಗಳು ಅಟ್ಟಾಡಿಸಿ ಹೊಡೆದು ಕೊಲ್ಲಬೇಕು ಎಂದು ಬರೆಯಲಾಗಿದೆ.

ಇನ್ನು ಪತ್ರದಲ್ಲೂ ಕೂಡ ಹಿಂದೂಗಳಿಗೆ ಅವಹೇಳನ ಮಾಡಲಾಗಿದೆ. ಅಲ್ಲದೇ ಇದು ಪ್ರಭು ಏಸು ಕ್ರಿಸ್ತನ ಪರವ್ ಫುಲ್ ಪ್ರವಾದಿಗಳ ಪ್ರಕಟಣೆ ಎಂದು ಪತ್ರವನ್ನು ಆರಂಭಿಸಲಾಗಿದೆ. ಆ ಬಳಿಕ ಪತ್ರದುದ್ದಕ್ಕೂ ಹಿಂದೂಗಳಿಗೆ ಅವಮಾನ ಮಾಡಲಾಗಿದೆ.

ಅಂದ್ಹಾಗೆ ಮಂಗಳೂರಿನಲ್ಲಿ ಕೋಮು ಸೌಹೌರ್ದತೆಯನ್ನು ಕದಡೋದಕ್ಕೆ ಅಂತಲೇ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ  ಕೃತ್ಯ ಎಸಗಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!