- Advertisement -
![]()
- Advertisement -
ಬೆಳ್ತಂಗಡಿ: ಇಲ್ಲಿನ ಅಳದಂಗಡಿಯಲ್ಲಿ ಆಟೋ ಹಾಗೂ ಓಮ್ನಿ ನಡುವೆ ಅಪಘಾತ ಸಂಭವಿಸಿದೆ.ಇನ್ನು ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಲ್ಯ ನಿವಾಸಿ ಭುಜಬಲಿ ಹೆಗ್ಡೆ (60ವ.) ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ.
ಇನ್ನು ಅಪಘಾತಕ್ಕೆ ಈಡಾದ ಓಮ್ನಿ ಶಿವಮೊಗ್ಗದ್ದು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ಜಖಂ ಆಗಿವೆ. ಇನ್ನು ಆಟೋ ಚಾಲಕ ಅಳದಂಗಡಿಯವರಾಗಿದ್ದು, ಅವರ ಮನೆಯಲ್ಲಿ ನಾಳೆ ಮದುವೆ ಕಾರ್ಯ ನಡೆಯಲಿದ್ದು ಅದಕ್ಕಾಗಿ ಸಿದ್ಧತೆಯಲ್ಲಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -


