Saturday, May 11, 2024
Homeಕರಾವಳಿಮಂಗಳೂರು: ಬೋಟ್ ಗಳಿಗೆ ದ್ವಿಮುಖ ಸಂವಹನ ಸಂಪರ್ಕ ಸಾಧನ ಅಳವಡಿಕೆ ಕಡ್ಡಾಯ!

ಮಂಗಳೂರು: ಬೋಟ್ ಗಳಿಗೆ ದ್ವಿಮುಖ ಸಂವಹನ ಸಂಪರ್ಕ ಸಾಧನ ಅಳವಡಿಕೆ ಕಡ್ಡಾಯ!

spot_img
- Advertisement -
- Advertisement -

ಮಂಗಳೂರು:ಮೀನುಗಾರರ ಸುರಕ್ಷೆ ದೃಷ್ಟಿಯಿಂದ ಮೀನುಗಾರಿಕೆಗೆ ತೆರಳುವ ಬೋಟು ಗಳಲ್ಲಿ ದ್ವಿಮುಖ ಸಂವಹನ ಸಂಪರ್ಕ ಸಾಧನ ಅಳವಡಿಸುವುದನ್ನು ಕಡ್ಡಾಯ ಗೊಳಿಸಲಾಗುವುದು ಎಂದು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಅವರು ಸೂಚಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬೋಟ್‌ಗಳಲ್ಲಿ ಸಂಪರ್ಕ ಸಾಧನಗಳನ್ನು ಅಳವಡಿಸುವ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೀನುಗಾರರ ಸುರಕ್ಷೆ ಸರಕಾರದ ಆದ್ಯತೆ. ಸಮುದ್ರದ ಬಹುದೂರ ಹೋಗಿ ಮೀನುಗಾರಿಕೆ ಮಾಡುವವರ ಬೋಟುಗಳ ಸ್ಥಿತಿಗತಿಗಳನ್ನು ಅವಲೋಕಿಸಲು ದ್ವಿಮುಖ ಸಂವಹನ ಸಂಪರ್ಕ ಸಾಧನವನ್ನು ಕಡ್ಡಾಯಗೊಳಿಸ ಲಾಗಿದೆ. ಆದರೆ ಈ ಸಾಧನದಲ್ಲಿರುವ ಬ್ಯಾಟರಿಗಳ ಚಾರ್ಜ್‌ ಖಾಲಿಯಾದಲ್ಲಿ ಬೋಟುಗಳಲ್ಲಿಯೇ ಸೋಲಾರ್‌ ಮೂಲಕ ರಿಚಾರ್ಜ್‌ ಸಾಧ್ಯವಾಗು ವಂತಹ ಯತ್ನಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಸೋಲಾರ್ ಪ್ಯಾನಲ್‌ಗ‌ಳು ಉಪ್ಪು ನೀರಿನಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಅಲ್ಲದೆ ಬಾಳಿಕೆಯೂ ಬರುವುದಿಲ್ಲ. ಹೀಗಾಗಿ ಇದಕ್ಕೆ ಪರ್ಯಾಯ ಕ್ರಮಗಳನ್ನು ಹುಡುಕಲು ಚಿಂತನೆ ನಡೆಸಲಾಗಿದೆ. ಕವಚ ದಂತಹ ಸೋಲಾರ್‌ ಫಲಕಗಳನ್ನು ಬೋಟ್‌ಗಳ ಮೇಲೆಯೆ ಅಳವಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು. ಈ ಸಾಧನ ಗಳಲ್ಲಿ ಕಂಡುಬಂದಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ತಜ್ಞರ ಸಮಿತಿ ರಚಿಸಿಕೊಂಡು, ಅವುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೀನುಗಾರ ಸ್ನೇಹಿಯನ್ನಾಗಿಸಲಾಗು ವುದು ಎಂದರು.

ಮೀನುಗಾರರಿಗೆ ಇದೀಗ 1.12 ಲಕ್ಷ ಕೆ.ಎಲ್‌. ಡೀಸೆಲ್‌ ಸಬ್ಸಿಡಿ ಈಗಾಗಲೇ ನೀಡಲಾಗುತ್ತಿದೆ. ಅದನ್ನು 1.50 ಲಕ್ಷ ಕೆ.ಎಲ್‌.ಗೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಗುರುವಾರ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಸ್ಕೈಲೋ ಅಥವಾ ಇಸ್ರೋ ಆಗಲಿ ಯಾವುದೇ ಸಂಸ್ಥೆ ತಯಾರಿಸಿದ ದ್ವಿಮುಖ ಸಂವಹನ ಸಂಪರ್ಕ ಸಾಧನಕ್ಕೆ ಗ್ಯಾರಂಟಿ ಇರಬೇಕು. ಆ ಯಂತ್ರದ ಸರ್ವಿಸ್‌ ಮಾಡಿಕೊಡುವ ಬಗ್ಗೆಯೂ ಖಚಿತತೆ ಇರಬೇಕು ಎಂದಿದ್ದಾರೆ.

ಶಾಸಕರಾದ ವೇದವ್ಯಾಸ ಕಾಮತ್‌, ರಘುಪತಿ ಭಟ್‌, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಕರಾವಳಿ ಕಾವಲು ಪಡೆಯ ಡಿಐಜಿ ವೆಂಕಟೇಶ್‌, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ, ಮೀನುಗಾರರ ಮುಖಂಡರಾದ ಡಾ| ಜಿ. ಶಂಕರ್‌, ಮೀನುಗಾರಿಕಾ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್‌ ಕುಮಾರ್‌, ಉಡುಪಿ ಜಿಲ್ಲೆಯ ಜಂಟಿ ನಿರ್ದೇಶಕ ಗಣೇಶ್‌ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!