Sunday, April 28, 2024
Homeಕರಾವಳಿಪಶ್ಚಿಮ ಬಂಗಾಳದ ಯುವತಿಯ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಪ್ರಕರಣ: ಕಡಬ ಮೂಲದ ಯುವಕನಿಗೆ‌ ಜಾಮೀನು ಮಂಜೂರು...

ಪಶ್ಚಿಮ ಬಂಗಾಳದ ಯುವತಿಯ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಪ್ರಕರಣ: ಕಡಬ ಮೂಲದ ಯುವಕನಿಗೆ‌ ಜಾಮೀನು ಮಂಜೂರು ಮಾಡಿದ ಕೊಲ್ಕತ್ತಾ ನ್ಯಾಯಾಲಯ!

spot_img
- Advertisement -
- Advertisement -

ಕಡಬ: ಪಶ್ಚಿಮ ಬಂಗಾಳದ ಪೊಲೀಸರಿಂದ ಬಂಧಿತನಾಗಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಯುವಕನಿಗೆ ಅಲ್ಲಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆಗಿರುವ ಪಶ್ಚಿಮ ಬಂಗಾಳದ ಯುವತಿಯೊಬ್ಬಳು ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದರು.

ಕೋಲ್ಕತ್ತಾದ ಲೇಕ್ ಟೌನ್ ಪೊಲೀಸ್ ಸ್ಟೇಷನ್ ನಲ್ಲಿ ಯುವತಿ ನೀಡಿದ ದೂರಿನನ್ವಯ, ಸೈಬರ್ ಕ್ರೈಂ ಪ್ರಕರಣ ದಾಖಲಾಗಿತ್ತು. ಕೋಲ್ಕತ್ತಾ ಪೊಲೀಸರು ಸೆಕ್ಷನ್ 354, 272, 500, 506, 507, 509 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ಪರಗಣದ ನ್ಯಾಯಾಲಯವು ನೂಜಿಬಾಳ್ತಿಲ ನಿವಾಸಿ ಸಂಜಯ್ ಕೃಷ್ಣನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಕೃಷ್ಣ ಬಳಸುತ್ತಿದ್ದ ಮೊಬೈಲ್ ನೆಟ್‌ವರ್ಕ್ ಅನ್ನು ಟ್ರ್ಯಾಕ್ ಮಾಡಿ ಕಡಬಕ್ಕೆ ಆಗಮಿಸಿದ ಕೋಲ್ಕತ್ತಾ ಪೊಲೀಸ್ ಅಧಿಕಾರಿ ಎಸ್.ಕೆ ತಾಜುದ್ದೀನ್ ನೇತೃತ್ವದ ಪೊಲೀಸರ ತಂಡವು ಬಸ್‌ನಲ್ಲಿ ಬರುತ್ತಿದ್ದ ಆರೋಪಿಯನ್ನು ಕಡಬದಲ್ಲಿ ಬಂಧಿಸಿ ಬಳಿಕ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಕೋಲ್ಕತ್ತಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕಾರಣ ಪುತ್ತೂರು ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ಪಶ್ಚಿಮ ಬಂಗಾಳಕ್ಕೆ ಸಂಜಯ್ ಕೃಷ್ಣನನ್ನು ಕರೆದುಕೊಂಡು ಹೋದ ಪೊಲೀಸರು ಸೆ.7ರಂದು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯು ಮೇಲ್ನೋಟಕ್ಕೆ ನಿರಪರಾಧಿ ಎಂದು ವಾದಿಸುವಲ್ಲಿ ಸಂಜಯ್ ಕೃಷ್ಣ ಪರ ವಕೀಲರು ಸಫಲರಾದ ಹಿನ್ನೆಲೆಯಲ್ಲಿ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

- Advertisement -
spot_img

Latest News

error: Content is protected !!