Saturday, June 6, 2026
Homeತಾಜಾ ಸುದ್ದಿಈ ಚಾಲಕನ ಪಾರ್ಕಿಂಗ್‌ ಕೌಶಲ್ಯ ನೋಡಿ ನೀವು ಬೆರಗಾಗುವುದು ಖಂಡಿತ !

ಈ ಚಾಲಕನ ಪಾರ್ಕಿಂಗ್‌ ಕೌಶಲ್ಯ ನೋಡಿ ನೀವು ಬೆರಗಾಗುವುದು ಖಂಡಿತ !

- Advertisement -
- Advertisement -

ವಯನಾಡ್: ಅತಿ ಆಯಕಟ್ಟಿನ ಸ್ಥಳದಲ್ಲಿ ಇನ್ನೋವಾವನ್ನು ಪಾರ್ಕಿಂಗ್ ಮಾಡಿದ ಚಾಲಕನೊಬ್ಬನ ಚಾಕಚಕ್ಯತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಕೇರಳದ ವಯನಾಡ್ ಜಿಲ್ಲೆಯ ಪೆರಿಯಾ ಅಲತಿಲ್ ಎಂಬಲ್ಲಿ ಅತಿ ಕಿರಿದಾದ ಪ್ರದೇಶದಲ್ಲಿ ಇನ್ನೋವಾ ಕಾರನ್ನು ಅಚ್ಚುಕಟ್ಟಾಗಿ ನಿಲ್ಲಿಸಿರುವ ವಿಡಿಯೋ ಈಗ ಅಂತರ್ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆ.

ಪಾದಚಾರಿ ಮಾರ್ಗದ ಪಕ್ಕದಲ್ಲಿ ಕಿರಿದಾದ ಸ್ಥಳದಲ್ಲಿ ಹಿಂದೆ ಮತ್ತು ಮುಂದೆ ಚಲಿಸಲು ಸಾಧ್ಯವಾಗದಷ್ಟು ಜಾಗದಲ್ಲಿ ಚಾಲಕ ಪಿ.ಜೆ.ಬಿಜು ಎಂಬವರು ಸಲೀಸಾಗಿ ಪಾರ್ಕಿಂಗ್ ಮಾಡಿದ್ದು, ಅದನ್ನು ಅಷ್ಟೇ ಸುಲಭವಾಗಿ ಚಾಲಕ ಹೊರ ತೆಗೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ನೋಡಿದ ನೆಟ್ಟಿಗರು ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಹುತೇಕರು ಪಾರ್ಕಿಂಗ್ ಕೌಶಲ್ಯವನ್ನು ಹಾಡಿಹೊಗಳಿದ್ದಾರೆ.

- Advertisement -

Latest News

error: Content is protected !!