Thursday, June 25, 2026
Homeಕರಾವಳಿಹತ್ಯಡ್ಕ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳೆ ಸಮೀಕ್ಷೆ ಮಾಹಿತಿ ಕಾರ್ಯಾಗಾರ

ಹತ್ಯಡ್ಕ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳೆ ಸಮೀಕ್ಷೆ ಮಾಹಿತಿ ಕಾರ್ಯಾಗಾರ

- Advertisement -
- Advertisement -

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಕಾರ್ಯಾಗಾರವು ಇಂದು ಸಂಘದ ಪ್ರಧಾನ ಕಚೇರಿ ಹಾಗೂ ಮೂರು ಶಾಖಾ ಕಚೇರಿಯಲ್ಲಿ ನಡೆಯಿತು.

ಅರಸಿನಮಕ್ಕಿಯ ಪ್ರಧಾನ ಕಚೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಹತ್ಯಡ್ಕ ಮತ್ತು ರೆಖ್ಯ ಗ್ರಾಮದ ಗ್ರಾಮ ಕಾರಣಿಕರಾದ ಕುಮಾರಿ ಕಾವ್ಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಚಂದ್ರಕಲಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಸಾಲಿಯಾನ್, ನಿರ್ದೇಶಕರಾದ ಮುರುಳೀಧರ ಶೆಟ್ಟಿಗಾರ್ ಮತ್ತು ಶ್ರೀಮತಿ ಬೇಬಿ, ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ಹಾಗೂ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬ್ಯಾಂಕ್ ನ ರೆಖ್ಯ ಶಾಖಾ ಕಚೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಹತ್ಯಡ್ಕ ಮತ್ತು ರೆಖ್ಯ ಗ್ರಾಮದ ಗ್ರಾಮ ಕಾರಣಿಕರಾದ ಕುಮಾರಿ ಕಾವ್ಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಚಂದ್ರಕಲಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಸಾಲಿಯಾನ್, ನಿರ್ದೇಶಕರಾದ ಮುರುಳೀಧರ ಶೆಟ್ಟಿಗಾರ್, ಬೇಬಿ ಕಿರಣ್ ಮತ್ತು ಶ್ರೀಮತಿ ಗಂಗಾವತಿ ಹಾಗೂ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬ್ಯಾಂಕ್ ನ ಶಿಬಾಜೆ ಶಾಖಾ ಕಚೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಶಿಬಾಜೆ ಮತ್ತು ಶಿಶಿಲ ಗ್ರಾಮದ ಗ್ರಾಮ ಕಾರಣಿಕರಾದ ಪರಮೇಶ್ವರ್ ಮತ್ತು ಕೃಷಿ ಇಲಾಖೆಯ ಅಧಿಕಾರಿ ಚಿದಾನಂದ ಹೂಗಾರ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಸಂಘದ ನಿರ್ದೇಶಕರಾದ ರತೀಶ್, ಸಂಘದ ಮಾಜಿ ಅಧ್ಯಕ್ಷ ದಂಬೆ ಪುರಂದರ ರಾವ್ ಹಾಗೂ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬ್ಯಾಂಕ್ ನ ಶಿಶಿಲ ಶಾಖಾ ಕಚೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಶಿಬಾಜೆ ಮತ್ತು ಶಿಶಿಲ ಗ್ರಾಮದ ಗ್ರಾಮ ಕಾರಣಿಕರಾದ ಪರಮೇಶ್ವರ್ ಮತ್ತು ಕೃಷಿ ಇಲಾಖೆಯ ಅಧಿಕಾರಿ ಚಿದಾನಂದ ಹೂಗಾರ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಸಂಘದ ನಿರ್ದೇಶಕರಾದ ಶ್ರೀಮತಿ ತಾರಾ ಟಿ ಚಿಪ್ಲುನ್ಕರ್, ಕುಶಾಲಪ್ಪ ಗೌಡ, ನಾಗೇಶ, ಕೊರಗಪ್ಪ ಗೌಡ ಹಾಗೂ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಬ್ಯಾಂಕ್ ವ್ಯಾಪ್ತಿಯ ನಾಲ್ಕು ಗ್ರಾಮದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 500ಕ್ಕೂ ಕೃಷಿಕ ಫಲಾನುಭವಿಗಳು ಮಾಹಿತಿ ಪಡೆದುಕೊಂಡರು.

- Advertisement -

Latest News

error: Content is protected !!