Monday, June 8, 2026
Homeಕರಾವಳಿಉಡುಪಿಮಂಗಳೂರು; ಮುಲ್ಕಿಯಲ್ಲಿ ಸರಣಿ ಅಪಘಾತ ಪ್ರಕರಣ: ಗಾಯಗೊಂಡಿದ್ದ ವಾಚ್ ಮ್ಯಾನ್ ಸಂಗಪ್ಪ ಸಾವು

ಮಂಗಳೂರು; ಮುಲ್ಕಿಯಲ್ಲಿ ಸರಣಿ ಅಪಘಾತ ಪ್ರಕರಣ: ಗಾಯಗೊಂಡಿದ್ದ ವಾಚ್ ಮ್ಯಾನ್ ಸಂಗಪ್ಪ ಸಾವು

- Advertisement -
- Advertisement -

ಮಂಗಳೂರು: ಗುರುವಾರ ಮುಲ್ಕಿಯಲ್ಲಿ ಸಂಭವಿಸಿದ್ದ ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.

ಗಾಯಾಳು ಸಂಗಪ್ಪ(57) ಮೃತಪಟ್ಟಿದ್ದು, ಬಪ್ಪನಾಡು ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ವಾಚ್ ಮ್ಯಾನ್ ಆಗಿದ್ದರು.

ಮುಲ್ಕಿ‌ ಪೇಟೆಯಲ್ಲಿ ಮದ್ಯ ಸೇವಿಸಿ ಧಾರವಾಡ ಮೂಲದ ಮಂಜುನಾಥ ಟ್ರಕ್ ಚಲಾಯಿಸಿದ್ದ ಕಾರಣ ಟ್ರಕ್
ಅತೀ ವೇಗವಾಗಿ ಬಂದು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ನುಗ್ಗಿ ಸ್ಕೂಟರ್, ಆಟೋ ರಿಕ್ಷಾ ಹಾಗೂ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದಿತ್ತು.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಂಗಪ್ಪ
ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದೇ ವೇಳೆ ಗಾಯಗೊಂಡಿದ್ದ ಸಂಗಪ್ಪ ಪುತ್ರಿ ಸವಿತಾ, ಆಟೋ ಚಾಲಕ ಧರ್ಮೇಂದ್ರ ಮತ್ತು ಪೊಲೀಸ್ ಸಿಬ್ಬಂದಿ ಗೀತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಮದ್ಯ ಸೇವಿಸಿ ಟ್ರಕ್ ಚಲಾಯಿಸಿದ್ದ ಚಾಲಕ ಮಂಜುನಾಥನನ್ನು ಗುರುವಾರವೇ ಪೊಲೀಸರು ಬಂಧಿಸಿದ್ದರು.

- Advertisement -

Latest News

error: Content is protected !!