Friday, April 19, 2024
Homeಉದ್ಯಮನೂತನ ಆದಾಯ ತೆರಿಗೆ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ;ಕೇಂದ್ರ ಹಣಕಾಸು ಸಚಿವಾಲಯದಿಂದ ಇನ್ಫೋಸಿಸ್ ಸಿಇಒಗೆ ಸಮನ್ಸ್

ನೂತನ ಆದಾಯ ತೆರಿಗೆ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ;ಕೇಂದ್ರ ಹಣಕಾಸು ಸಚಿವಾಲಯದಿಂದ ಇನ್ಫೋಸಿಸ್ ಸಿಇಒಗೆ ಸಮನ್ಸ್

spot_img
- Advertisement -
- Advertisement -

ಹೊಸದಿಲ್ಲಿ: ಜೂನ್ ನಿಂದ ಬಳಕೆಯಲ್ಲಿರುವ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನ ಕಾರ್ಯನಿರ್ವಹಣೆಯಲ್ಲಿ ಮುಂದುವರಿದಿರುವ ತಾಂತ್ರಿಕ ದೋಷಗಳ ಕುರಿತಾಗಿ ಸೋಮವಾರ ವಿವರಣೆ ನೀಡುವಂತೆ ಹಣಕಾಸು ಸಚಿವಾಲಯವು ಇನ್ಫೋಸಿಸ್ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಸಲೀಲ್ ಪರೇಖ್ ಗೆ ಸಮನ್ಸ್ ನೀಡಿದೆ.

ಈ ವಿಷಯದ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು.

ವೆಬ್ ಸೈಟ್ ಆರಂಭವಾಗಿ ಎರಡೂವರೆ ತಿಂಗಳು ಕಳೆದ ನಂತರವೂ ತಾಂತ್ರಿಕ ದೋಷಗಳನ್ನು ಇನ್ನೂ ಏಕೆ ಸರಿಪಡಿಸಲಾಗಿಲ್ಲ ಎಂಬುದರ ಕುರಿತಾಗಿ ವಿವರಣೆ ನೀಡುವಂತೆ ಪರೇಖ್ ಗೆ ಸಮನ್ಸ್ ನೀಡಲಾಗಿದೆ. ಆಗಸ್ಟ್ 21 ರಂದು ವೆಬ್ ಸೈಟ್ ಕಾರ್ಯನಿರ್ವಹಣೆ ಸ್ಥಗಿತದ ನಂತರ ಪರೇಖ್ ಅವರಿಗೆ ಸಮನ್ಸ್ ನೀಡಲು ನಿರ್ಧರಿಸಲಾಗಿತ್ತು.

ವೆಬ್ ಸೈಟ್ ತುಂಬಾ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರೊಫೈಲ್ ಅಪ್ ಡೇಟಿಂಗ್, ಪಾಸ್ ವರ್ಡ್ ಬದಲಾವಣೆಗೂ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂದು ಬಳಕೆದಾರರು ದೂರಿದ್ದರು.

ಪೋರ್ಟಲ್ ಅನ್ನು ಹೆಚ್ಚು ಮಾನವೀಯ ಮತ್ತು ಬಳಕೆದಾರರ ಸ್ನೇಹಿ ಮಾಡುವ ನಿಟ್ಟಿನಲ್ಲಿ ಪೋರ್ಟಲ್ ಬಗ್ಗೆ ಕೆಲಸ ಮಾಡಲು ಪರೇಖ್ ಹಾಗೂ ಹಿರಿಯ ಕಾರ್ಯನಿರ್ವಾಹಕ ಪ್ರವೀಣ್ ರಾವ್ ಅವರನ್ನು ಕೇಳಿಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

- Advertisement -
spot_img

Latest News

error: Content is protected !!