Saturday, May 18, 2024
Homeತಾಜಾ ಸುದ್ದಿಬೇರೆ ಪ್ರದೇಶದಿಂದ ಕರ್ನಾಟಕಕ್ಕೆ ಬರುತ್ತಿದ್ದೀರಾ? ಹಾಗಾದ್ರೇ ಈ ಸುದ್ದಿಯನ್ನು ತಪ್ಪದೆ ಓದಿ

ಬೇರೆ ಪ್ರದೇಶದಿಂದ ಕರ್ನಾಟಕಕ್ಕೆ ಬರುತ್ತಿದ್ದೀರಾ? ಹಾಗಾದ್ರೇ ಈ ಸುದ್ದಿಯನ್ನು ತಪ್ಪದೆ ಓದಿ

spot_img
- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರವು ಇತರ ರಾಜ್ಯಗಳಲ್ಲಿ ಅಥವಾ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ಮರಳಿ ಕರ್ನಾಟಕಕ್ಕೆ ಬರಲು ಅನುಮತಿ ನೀಡಲು ನಿರ್ಧರಿಸಿದ್ದು ಕೆಲವು ಅಗತ್ಯ ಮಾರ್ಗ ಸೂಚಿಗಳನ್ನು ಹೊರಡಿಸಿದೆ. ಅದರಂತೆ ಹೊರ ದೇಶದಲ್ಲಿ ಅಥಾವ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವರು ಕಡ್ಡಾಯವಾಗಿ ಕರ್ನಾಟಕದ ಆದೇಶವನ್ನು ಅನುಸರಿಸಬೇಕಾಗಿದೆ.

ಎರಡು ಕಡೆಯಿಂದ ಪ್ರವೇಶಕ್ಕೆ ಅನುಮತಿ

ಲಾಕ್‌ಡೌನ್‌ನಿಂದಾಗಿ ಇತರ ರಾಜ್ಯಗಳಲ್ಲಿ ಅಥವಾ ವಿದೇಶಗಳಲ್ಲಿ ಸಿಲುಕಿರುವ ಕರ್ನಾಟಕ ನಿವಾಸಿಗಳಿಗೆ ಮಾತ್ರ ಸೋಮವಾರದಿಂದ ಬೆಂಗಳೂರು ಮತ್ತು ಮಂಗಳೂರಿನ ಅಂತರರಾಜ್ಯ ಗಡಿ ಮತ್ತು ವಿಮಾನ ನಿಲ್ದಾಣಗಳ ಮೂಲಕ ತಮ್ಮ ರಾಜ್ಯಕ್ಕೆ ಮರಳಲು ಅವಕಾಶ ನೀಡಲಾಗಿದ್ದು, ಅದರಂತೆ ಇಲ್ಲಿಗೆ ಕನ್ನಡಿಗರು ಆಗಮಿಸುತ್ತಿದ್ದಾರೆ. ಕರ್ನಾಟಕಕ್ಕೆ ಮರಳಲು ನೋಂದಾಯಿಸುವಾಗ ಅವರು ತಮ್ಮ ಆಗಮನದ ಸ್ಥಳ ಮತ್ತು ದಿನಾಂಕವನ್ನು ತಿಳಿಸಬೇಕಾಗಿದ್ದು, ಕ್ಯಾರೆಂಟೈನ್ ಸೌಲಭ್ಯಗಳ ಲಭ್ಯತೆಗೆ ಅನುಗುಣವಾಗಿ ಕರ್ನಾಟಕಕ್ಕೆ ಬರಲು ಅವಕಾಶ ನೀಡಲಾಗುವುದು ಮತ್ತು ಎಲ್ಲರೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ.

ಸೇವಾ ಸಿಂಧು ವೆಬ್‌ಪೋರ್ಟ್‌ಲ್ ಮೂಲಕ ನೋಂದಾವಣೆ

ದೇಶಾದಾದ್ಯಂತ ಲಾಕ್‍ಡೌನ್ ಆದೇಶ ಹಿನ್ನೆಲೆಯಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಮತ್ತು ಜಿಲ್ಲೆಗೆ ಹಿಂತಿರುಗಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಆಗಮನದ ದಿನಾಂಕ ಮತ್ತು ರಾಜ್ಯದ ನಿರ್ದಿಷ್ಠ ಸ್ಥಳದಲ್ಲಿ ಪ್ರವೇಶವನ್ನು ನೀಡಲಾಗುವುದು. ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಜನರು ಆಯಾ ಕೇಂದ್ರದ ಮೂಲಕವೇ ಬರಬೇಕು. ಅಲ್ಲಿ ನೋಂದಣಿ ಮಾಡಿಕೊಂಡು, ಆರೋಗ್ಯ ತಪಾಸಣೆ ಒಳಪಡಬೇಕು.
ರಾಜ್ಯಕ್ಕೆ ಬಂದ ನಂತರ ಹೋಟೆಲ್, ಆಸ್ಪತ್ರೆ, ಹಾಸ್ಟೆಲ್ ಮುಂತಾದ ಸೌಲಭ್ಯಗಳಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಒಳಪಡಬೇಕು ಮತ್ತು ಕಡ್ಡಾಯವಾಗಿ ಕ್ವಾರಂಟೈನ್ ನಂತರ, ಕೋವಿಡ್ 19 ಪರೀಕ್ಷಾ ಫಲಿತಾಂಶವು ನಕಾರಾತ್ಮಕವಾಗಿ ಬಂದಾಗ ಮಾತ್ರ ಮನೆಗೆ ಹೋಗಲು ಅನುಮತಿ ನೀಡಲಾಗುತ್ತದೆ.

ವಿದೇಶ ಪ್ರಯಾಣಿಕರ ವರ್ಗಿಕರಣ

ವಿದೇಶಿ ಪ್ರಯಾಣಿಕರಲ್ಲಿ ಎ ಮತ್ತು ಬಿ ಎಂದು 2 ವಿಭಾಗ ಮಾಡಲಾಗುವುದು. ಕೆಮ್ಮು, ಜ್ವರ, ನೆಗಡಿ ಇರುವವರು ಎ ವಿಭಾಗದ ಪ್ರಯಾಣಿಕರು. ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಿ ಬೇಕಾಗುವ ಅಗತ್ಯ ಚಿಕಿತ್ಸೆ ನೀಡಲಾಗುವುದು.

ಬಿ ವಿಭಾಗ ಎಂದರೆ ಯಾವುದೇ ರೋಗ ಲಕ್ಷಣ ಇಲ್ಲದವರು ಅಂತವರನ್ನು ಹೋಟೆಲ್/ಹಾಸ್ಟೆಲ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗುವುದು. ವಿಮಾನ ನಿಲ್ದಾಣದಲ್ಲೇ ಹೋಟೆಲ್‍ಗಳನ್ನು ಗುರುತಿಸಲು ಏರ್ಪೋರ್ಟ್ ನಲ್ಲೆ ಆನ್‍ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರಯಾಣಿಕರು ಗುರುತಿಸಿರುವ ಹೋಟೆಲ್‍ಗಳಿಗೆ ತಲುಪಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ.

ಕಡ್ಡಾಯ ಕ್ವಾರಂಟೈನ್

ಅಂತರ್ ಜಿಲ್ಲೆಗಳ ಸಂಚಾರಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಭಿವೃದ್ಧಿ ಪಡಿಸಿರುವ ಸೇವಾ ಸಿಂಧು ವೆಬ್ಸೈಟ್ ಮೂಲಕ ಆನ್‍ಲೈನ್‍ದಲ್ಲಿ ಪಾಸ್ ಪಡೆದುಕೊಳ್ಳಬಹುದಾಗಿದೆ. ರಾಜ್ಯದ ನಾನಾ ಜಿಲ್ಲೆಗೆ ಆಗಮಿಸುವವರಿಗೆ ಮತ್ತು ಪ್ರಯಾಣ ಬೆಳೆಸುವವರಿಗೆ ಸಮನ್ವಯತೆ ಮತ್ತು ಸಹಕಾರ ನೀಡಲು ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಹೊರ ರಾಜ್ಯದಿಂದ ಬಂದವರು ಕ್ವಾರೆಂಟೈನ್‍ನಲ್ಲಿರಲು ಹಾಸ್ಟೆಲ್ (ಉಚಿತವಾಗಿ) ಆಥವಾ ಹಣ ಪಾವತಿಸಿ ಹೋಟೆಲ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮನೆಯಲ್ಲಿ ಕ್ವಾರಂಟೈನ್‍ನಲ್ಲಿ ಇರಲು ಅವಕಾಶ ನೀಡುವುದಿಲ್ಲ. ಕ್ವಾರಂಟೈನ್‍ನ 14ನೇ ದಿನದಂದು ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗುವುದು.

- Advertisement -
spot_img

Latest News

error: Content is protected !!