ಬೆಂಗಳೂರು: ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡುತ್ತಿದ್ದ ಐದು ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಇಂದಿರಾ ಆಹಾರ ಕಿಟ್ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.
ಇಂದಿರಾ ಆಹಾರ ಕಿಟ್ ನಲ್ಲಿ ತಲಾ ಒಂದು ಕೆಜಿ
ತೊಗರಿಬೇಳೆ, ಹೆಸರು ಕಾಳು, ಉಪ್ಪು, ಸಕ್ಕರೆ ಮತ್ತು ಒಂದು ಲೀಟರ್ ಅಡುಗೆ ಎಣ್ಣೆ ವಿತರಿಸಲಾಗುತ್ತದೆ
ಒಂದು ಪಡಿತರ ಚೀಟಿಯಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಪಡಿತರದಾರರು ಇದ್ದರೆ ಅರ್ಧ ಕೆಜಿ ತೂಕದ ಕಿಟ್, ಮೂರು ಅಥವಾ ನಾಲ್ಕು ಮಂದಿ ಇದ್ದರೆ ಒಂದು ಕೆಜಿ ತೂಕದ ಕಿಟ್ ಮತ್ತು ಐದಕ್ಕಿಂತ ಹೆಚ್ಚು ಮಂದಿ ಇದ್ದರೆ ಒಂದೂವರೆ ಕೆಜಿ ತೂಕದ ಕಿಟ್ ವಿತರಣೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸದ್ಯ ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಒಟ್ಟು 1,26,15,815 ಬಿಪಿಎಲ್ ಪಡಿತರ ಕಾರ್ಡ್‌ಗಳು ಇದ್ದು, 4.48.62.192 ಜನರು ಅನುಕೂಲ ಪಡೆಯುತ್ತಿದ್ದಾರೆ.


