Wednesday, June 3, 2026
Homeತಾಜಾ ಸುದ್ದಿಎಲ್.ಕೆ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಘೋಷಣೆ

ಎಲ್.ಕೆ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಘೋಷಣೆ

- Advertisement -
- Advertisement -

ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ವನ್ನು ಘೋಷಣೆ ಮಾಡಿದ್ದು ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿಯವರಿಗೆ ಈ ಗೌರವು ಲಭಿಸಿರುತ್ತದೆ.

ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ ಮೂಲಕ, ’ಎಲ್.ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ. ಈ ಕುರಿತು ನಾನು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಿಷಯ ಹಂಚಿಕೊಂಡಿದ್ದು ಅದನ್ನು ಕೇಳಿ ಅವರು ಬಹಳ ಖುಷಿಪಟ್ಟರು” ಎಂದು ಹಂಚಿಕೊಂಡಿದ್ದಾರೆ.

ರಾಮ ಮಂದಿರ ಹೋರಾಟದ ರೂವಾರಿ, ಬಿಜೆಪಿ ಭೀಷ್ಮ ಎಂದೇ ಜನಪ್ರಿಯರು ಅಡ್ವಾಣಿಯವರು. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡಿದ್ದು, ಇದರ ಬೆನ್ನಲ್ಲೇ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಣೆ ಮಾಡಿರುವುದು ಇಲ್ಲಿ ಪ್ರಮುಖವಾಗಿದೆ.

- Advertisement -

Latest News

error: Content is protected !!