Wednesday, June 3, 2026
Homeಅಪರಾಧಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆ; ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಮಹಿಳೆ

ಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆ; ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಮಹಿಳೆ

- Advertisement -
- Advertisement -

ಬಂಟ್ವಾಳ : ಮಾಣಿಯಲ್ಲಿ ಖಾಸಗಿ ಬಸ್ಸು ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ ಮಹಿಳೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಉಪ್ಪಿನಂಗಡಿ ನಿವಾಸಿ ರಾಧಾ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಾಯಗೊಂಡ ಮಹಿಳೆ.

ಘಟನೆಯ ವಿವರ: ರಾಧಾ ಅವರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಸ್ಸು ಚಾಲಕ ಅಬ್ದುಲ್ ಸಮದ್ ಎಂಬಾತನ ನಿರ್ಲಕ್ಷ್ಯದ ಚಾಲನೆ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದ್ದು, ನಿರ್ಲಕ್ಷ್ಯದ ಚಾಲನೆಯಿಂದ ರಾಧಾ ಅವರು ಬಸ್ಸಿನಿಂದ ಮುಂಭಾಗದ ಬಾಗಿಲ ಮೂಲಕ ರಸ್ತೆಗೆಸೆಯಲ್ಪಟಿದ್ದಾರೆ. ಘಟನೆಯಿಂದ ಗಾಯಗೊಂಡ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ಗಾಯಾಳು ಮಹಿಳೆಯ ಪುತ್ರಿ ಎಂ. ಸುನಿತಾ ಅವರು ನೀಡಿದ ದೂರಿನಂತೆ ಬಸ್ಸು ಚಾಲಕ ಅಬ್ದುಲ್ ಸಮದ್‌ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!