Saturday, June 6, 2026
Homeಕರಾವಳಿಶ್ರೀ ಹೋಟೆಲ್‌ ಪಾಲುದಾರ ಮನೋಜ್ ಪೂಜಾರಿ ಅನಾರೋಗ್ಯದಿಂದ ನಿಧನ

ಶ್ರೀ ಹೋಟೆಲ್‌ ಪಾಲುದಾರ ಮನೋಜ್ ಪೂಜಾರಿ ಅನಾರೋಗ್ಯದಿಂದ ನಿಧನ

- Advertisement -
- Advertisement -

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಹೋಟೆಲ್‌ ಪಾಲುದಾರ ಮನೋಜ್ ಪೂಜಾರಿ(38) ತಲೆಗೆ ಸಂಬಂಧಪಟ್ಟ ಕಾಯಿಗೆಗೆ ತುತ್ತಾಗಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಬಿ.ಸಿ.ರೋಡಿನ ಶ್ರೀ ಹೋಟೆಲ್ ಗೆ ಪ್ರತಿನಿತ್ಯ ನೂರಾರು ಗ್ರಾಹಕರು ಬರುತ್ತಿದ್ದು, ಪ್ರತೀ ಗ್ರಾಹಕರು ಹೋಟೆಲ್‌ನ ಊಟವನ್ನು ಇಷ್ಟಪಡುತ್ತಿದ್ದರು. ಮನೋಜ್ ಅವರು ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರೀ ಸೇವಾ ಸಂಘದ ಕಾರ್ಯದರ್ಶಿಯಾಗಿದ್ದು, ಕೋಟೆಕಣಿ ಶ್ರೀರಾಮ ಮಂದಿರದಲ್ಲಿಯೂ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

- Advertisement -

Latest News

error: Content is protected !!