ನವದೆಹಲಿ: ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಇರಾನ್‌ನಲ್ಲಿರುವ ಭಾರತೀಯರು ಇರಾನ್ ತೊರೆಯುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಭಾರತೀಯ ಪ್ರಜೆಗಳು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ತಕ್ಷಣವೇ ಇರಾನ್ ತೊರೆಯಲು ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.
ಅಗತ್ಯವಿಲ್ಲದ ಹೊರತು ಇರಾನ್‌ಗೆ ಪ್ರಯಾಣ ಬೆಳೆಸದಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸೂಚನೆ ನೀಡಲಾಗಿದ್ದು, ಇರಾನ್‌ನಲ್ಲಿ ವಾಸವಿರುವ ಭಾರತೀಯರು ಪ್ರತಿಭಟನಾ ಸ್ಥಳಗಳಿಂದ ದೂರವಿರಬೇಕು ಮತ್ತು ಯಾವುದೇ ರೀತಿಯ ಪ್ರತಿಭಟನೆಗಳಲ್ಲಿ ಭಾಗಿಯಾಗಬಾರದು ಎಂದು ಸೂಚಿಸಲಾಗಿದೆ.
ಭಾರತೀಯರು ತಕ್ಷಣವೇ ತಮ್ಮ ವಿವರಗಳನ್ನು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದೂ ನಿರ್ದೇಶನ ನೀಡಲಾಗಿದ್ದು, ಇಂಟರ್ನೆಟ್ ಸ್ಥಗಿತ, ವಿಮಾನಯಾನ ಸೇವೆಗಳಲ್ಲಿನ ವ್ಯತ್ಯಯಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಇರಾನ್ ನಲ್ಲಿರುವ ಭಾರತೀಯರಿಗೆ ತಿಳಿಸಲಾಗಿದೆ. ಇರಾನ್‌ನಲ್ಲಿ ಆಡಳಿತಾರೂಢ ಖೊಮೇನಿ ಸರ್ಕಾರದ ವಿರುದ್ಧ ಜನವರಿ ತಿಂಗಳ ಆರಂಭದಿಂದಲೇ ಪ್ರತಿಭಟನೆ ಮುಂದುವರಿದಿದೆ.


