Thursday, June 4, 2026
Homeಕರಾವಳಿಉಡುಪಿಸೇನೆಯ ಸಮಯಪ್ರಜ್ಞೆಯಿಂದ ಪುಲ್ವಾಮಾ ಮಾದರಿಯ ಭಯಾನಕ ದಾಳಿ ವಿಫಲ:

ಸೇನೆಯ ಸಮಯಪ್ರಜ್ಞೆಯಿಂದ ಪುಲ್ವಾಮಾ ಮಾದರಿಯ ಭಯಾನಕ ದಾಳಿ ವಿಫಲ:

- Advertisement -
- Advertisement -

ಶ್ರೀನಗರ : ಜಮ್ಮುಕಾಶ್ಮೀರದಲ್ಲಿ ಕೆಲವು ದಿನಗಳಿಂದ ಉಗ್ರರ ಪುಂಡಾಟ ಮುಗಿಲು ಮುಟ್ಟಿದೆ. ಆದರೆ ಈಗ ಪುಲ್ವಾಮಾ ಮಾದರಿಯಲ್ಲಿ ದಾಳಿ ನಡೆಸಲು ಉಗ್ರರು ಮುಂದಾಗಿದ್ದರು. ಈ ಸಂಚನ್ನು ವಿಫಲಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಗುರುವಾರ ಶೋಧ ಕಾರ್ಯ ಆರಂಭಿಸಿದ ಭಾರತೀಯ ಸೇನೆ, ಪುಲ್ವಾಮಾದಿಂದ 9. ಕಿ.ಮೀ. ದೂರದಲ್ಲಿ ಸುಮಾರು 52 ಕೆ.ಜಿ. ತೂಕದ ಸ್ಪೋಟಕ ವಶಪಡಿಸಿಕೊಳ್ಳುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಹಣ್ಣಿನ ತೋಟವೊಂದರಲ್ಲಿ ಹೂತು ಹಾಕಿದ್ದ ಸಿಂಟೆಕ್ಸ್ ಟ್ಯಾಂಕ್ ಒಳಗಡೆ 52 ಕೆಜಿ ಸ್ಪೋಟಕ ವಸ್ತು ಪತ್ತೆಯಾಗಿತ್ತು. ಈ ಸ್ಪೋಟಕಗಳನ್ನು 416 ಪೊಟ್ಟಣಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಪೊಟ್ಟಣವೂ 125 ಗ್ರಾಂ ತೂಕ ಹೊಂದಿದೆ ಎಂದು ಸೇನಾಪಡೆ ಹೇಳಿದೆ.

- Advertisement -

Latest News

error: Content is protected !!