Friday, May 3, 2024
Homeತಾಜಾ ಸುದ್ದಿ"ಮುಂಬೈ ನಗರದಲ್ಲಿ ಸೆಪ್ಟೆಂಬರ್ 30 ರವರೆಗೆ ನಿರ್ಬಂಧ"-ಸೆಕ್ಷನ್ 144 ಜಾರಿ

“ಮುಂಬೈ ನಗರದಲ್ಲಿ ಸೆಪ್ಟೆಂಬರ್ 30 ರವರೆಗೆ ನಿರ್ಬಂಧ”-ಸೆಕ್ಷನ್ 144 ಜಾರಿ

spot_img
- Advertisement -
- Advertisement -

ಮುಂಬೈ : ಮುಂಬೈ ನಗರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈ ಎಲ್ಲಾ ಕಾರಣಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.

ನಿನ್ನೆ ಮಧ್ಯರಾತ್ರಿಯಿಂದ ಸೆಕ್ಷನ್ 144 ಜಾರಿಗೆ ಬರಲಿದ್ದು, ಸೆಪ್ಟೆಂಬರ್ 30 ರ ಮಧ್ಯರಾತ್ರಿ ಕೊನೆಗೊಳ್ಳಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳ ಯಾವುದೇ ಚಲನೆಯನ್ನು ನಿಷೇಧಿಸಿಲಾಗಿರುತ್ತದೆ.ಅಗತ್ಯ ಚಟುವಟಿಕೆಗಳು, ಸರಕುಗಳ ಪೂರೈಕೆ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಟ್ರಕ್‌ಗಳು, ಸರಕುಗಳನ್ನು ಸಾಗಿಸುವ ಟೆಂಪೊ ಹೊರತುಪಡಿಸಿ ಹಲವು ಕ್ಷೇತ್ರಗಳಿಗೆ ನಿರ್ಬಂಧ ಹೇರಲಾಗಿದೆ. ಅಂತರರಾಷ್ಟ್ರೀಯ ಮೂಲಸೌಕರ್ಯ ಹಾಗೂ ತುರ್ತು ಸೇವೆಗಳು,ಮಾಧ್ಯಮ,ಬಂದರು, ಆಹಾರ, ದಿನಸಿ ಮತ್ತು ಅಗತ್ಯ ವಸ್ತುಗಳ ಮನೆ ವಿತರಣೆಯನ್ನು ಒದಗಿಸುವ ಸೇವೆಗಳು,ಇ-ಕಾಮರ್ಸ್ ಚಟುವಟಿಕೆ ಮೊಡ್ಲಾದ ಸೇವೆಗಳು ಲಭ್ಯ ಎನ್ನಲಾಗಿದೆ.

- Advertisement -
spot_img

Latest News

error: Content is protected !!