Thursday, April 25, 2024
Homeತಾಜಾ ಸುದ್ದಿನಾಸಾದ ಉನ್ನತ ಹುದ್ದೆಗೆ ಹಂಗಾಮಿ ಮುಖ್ಯಸ್ಥರಾಗಿ ಭಾರತ ಮೂಲದ ಭವ್ಯಾ ಲಾಲ್ ಆಯ್ಕೆ

ನಾಸಾದ ಉನ್ನತ ಹುದ್ದೆಗೆ ಹಂಗಾಮಿ ಮುಖ್ಯಸ್ಥರಾಗಿ ಭಾರತ ಮೂಲದ ಭವ್ಯಾ ಲಾಲ್ ಆಯ್ಕೆ

spot_img
- Advertisement -
- Advertisement -

ವಾಷಿಂಗ್ಟನ್ : ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಆಯಂಡ್ ಸ್ಪೇಸ್​ ಅಡ್ಮಿನಿಸ್ಟ್ರೇಷನ್​ (ನಾಸಾ) ಏಜೆನ್ಸಿಯ ಸಿಬ್ಬಂದಿ ವಿಭಾಗದ ಹಂಗಾಮಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಭವ್ಯಾ ಲಾಲ್ ಆಯ್ಕೆಯಾಗಿದ್ದಾರೆ.

ಭವ್ಯಾ ಲಾಲ್ ಎಂಜಿನಿಯರಿಂಗ್ ಮತ್ತು ಸ್ಪೇಸ್​ ಟೆಕ್ನಾಲಜಿಯಲ್ಲಿ ಅನುಭವ ಹೊಂದಿದ್ದು, 2005ರಿಂದ ಡಿಫೆನ್ಸ್ ಅನಾಲಿಸಿಸ್ ಸೈನ್ಸ್ ಆಯಂಡ್​​ ಟೆಕ್ನಾಲಜಿ ಪಾಲಿಸಿ ಇನ್ಸ್​​ಟಿಟ್ಯೂಟ್​(ಎಸ್​ಟಿಪಿಐ)ನ ಸಂಶೋಧನಾ ವಿಭಾಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಪಾರ ಅನುಭವ, ಇವರ ನೇಮಕದೊಂದಿಗೆ ಸಂಸ್ಥೆಗೆ ಲಭ್ಯವಾಗಲಿದೆ ಎಂದು ನಾಸಾ ಪ್ರಕಟಣೆ ಹೇಳಿದೆ.

ನಾಸಾ, ರಕ್ಷಣಾ ವಿಭಾಗ ಹಾಗೂ ಬೇಹುಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ನ್ಯಾಷನಲ್ ಅಕಾಡಮಿ ಆಫ್ ಸೈನ್ಸ್‌ನ ಐದು ಅತ್ಯುನ್ನತ ಸಮಿತಿಗಳ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಯೋಜನಾ ನೀತಿಗಳನ್ನು ರೂಪಿಸುವಲ್ಲಿ ಭವ್ಯಾ ಲಾಲ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆನ್ನು ನಿರ್ವಹಿಸಿರುವ, ಏಜೆನ್ಸಿ ರಿವ್ಯೂ ಟೀಮ್‌ನ ಸದಸ್ಯೆಯಾಗಿ ಭವ್ಯಾ ಲಾಲ್ ಕಾರ್ಯ ನಿರ್ವಹಿಸಿದ್ದರು.

- Advertisement -
spot_img

Latest News

error: Content is protected !!