Saturday, May 4, 2024
Homeಕರಾವಳಿಪುತ್ತೂರಿನಿಂದ ನಾಪತ್ತೆಯಾಗಿದ್ದ ಮಹಿಳೆ ಬೆಂಗಳೂರಿನಲ್ಲಿ ಪ್ರಿಯಕರನೊಂದಿಗೆ ಪತ್ತೆ

ಪುತ್ತೂರಿನಿಂದ ನಾಪತ್ತೆಯಾಗಿದ್ದ ಮಹಿಳೆ ಬೆಂಗಳೂರಿನಲ್ಲಿ ಪ್ರಿಯಕರನೊಂದಿಗೆ ಪತ್ತೆ

spot_img
- Advertisement -
- Advertisement -

ಪುತ್ತೂರು  :  ಇಲ್ಲಿನ ಸಾಲ್ಮರದಲ್ಲಿ ವಾಸವಿದ್ದ  ಉತ್ತಮ ಬಾಬು ಇದರಗುಚ್ಚಿ ಎಂಬವರ ಪತ್ನಿ ಲಲಿತಾ ಜನವರಿ 22 ರಂದು ನಾಪತ್ತೆಯಾಗಿದ್ದರು. ಇದೀಗ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಆಕೆಯನ್ನು  ಪತ್ತೆ ಹಚ್ಚಿದ್ದಾರೆ .

ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹತ್ತರಗಿ ಇಂದಿರಾನಗರ ಗ್ರಾಮದ ನಿವಾಸಿಯಾಗಿರುವ ಉತ್ತಮ್ ಐದು ವರ್ಷಗಳ ಹಿಂದೆ ಲಲಿತಾ ಎಂಬವರನ್ನು ವಿವಾಹವಾಗಿದ್ದರು. ಮುರದಲ್ಲಿ ಸೆಲೂನ್ ಒಂದದಲ್ಲಿ ಕ್ಷೌರಿಕರಾಗಿದ್ದ ಉತ್ತಮ್ ಕಳೆದ ಎರಡು ತಿಂಗಳುಗಳಿಂದ ತನ್ನ ಪತ್ನಿಯೊಂದಿಗೆ ಸಾಲ್ಮರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಉತ್ತಮ್ ತನ್ನ ಪತ್ನಿ ಕಾಣೆಯಾಗಿರುವ ಬಗ್ಗೆ   ಜ.26ಕ್ಕೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು  ಬೆಂಗಳೂರಿನಲ್ಲಿ  ಲಲಿತಾರವರನ್ನು ಆಕೆಯ ಪ್ರಿಯಕರನ ಜತೆ  ಪತ್ತೆ ಹಚ್ಚಿದ್ದಾರೆ.  

ನಾಪತ್ತೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಲಲಿತಾ ರವರಿಗೆ ಮದುವೆಗೆ ಮೊದಲು ಒಬ್ಬ ಪ್ರಿಯಕರ ಇದ್ದ ಅನ್ನೋದು ಗೊತ್ತಾಗಿದೆ.  ಅಲ್ಲದೇ  ಒಂದೂವರೆ ವರ್ಷದ ಹಿಂದೆಯೂ ಲಲಿತಾ ಅವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದೇ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ ಲಲಿತಾ ಅವರನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ

- Advertisement -
spot_img

Latest News

error: Content is protected !!