Tuesday, April 23, 2024
Homeಕ್ರೀಡೆಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್: ಆಂಗ್ಲರ ದಾಳಿಗೆ ಶರಣಾದ ಟೀಂ ಇಂಡಿಯಾ

ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್: ಆಂಗ್ಲರ ದಾಳಿಗೆ ಶರಣಾದ ಟೀಂ ಇಂಡಿಯಾ

spot_img
- Advertisement -
- Advertisement -

ಚೆನ್ನೈ: ಜೇಮ್ಸ್ ಆಯಂಡರ್ಸನ್ ಮತ್ತು ಜ್ಯಾಕ್ ಲೀಚ್ ಬಿಗು ದಾಳಿಗೆ ಟೀಂ ಇಂಡಿಯಾ ಬ್ಯಾಟ್ಸಮನ್ ಗಳು ಉತ್ತರ ಕಂಡುಕೊಳ್ಳಲು ವಿಫಲರಾದ ಕಾರಣ ಭಾರತ ತಂಡ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.

420 ರನ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 192 ರನ್​ಗೆ ಆಲೌಟ್ ಆಗುವ ಮೂಲಕ ಆಂಗ್ಲರು 227 ರನ್​ಗಳ ಭರ್ಜರಿ ಜಯ ಸಾಧಿಸಿದರು. ನಾಯಕ ವಿರಾಟ್ ಕೊಹ್ಲಿ ಬಿಟ್ಟರೆ ಮತ್ತೆಲ್ಲಾ ಅನುಭವಿ ಬ್ಯಾಟ್ಸ್​ಮನ್​ಗಳು ಭಾರತದ ಪಿಚ್​ನಲ್ಲೂ ಘನತೆಗೆ ತಕ್ಕಂತೆ ಆಡಲೇಯಿಲ್ಲ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ನೀಡಿದ 420 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ (72) ಮತ್ತು ಓಪನರ್ ಶುಭಮಾನ್ ಗಿಲ್ (50) ಹೊರತುಪಡಿಸಿ ಉಳಿದವರು ಯಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಉಪನಾಯಕ ಅಜಿಂಕ್ಯ ರಹಾನೆ, ವಾಷಿಂಗ್ಟನ್ ಸುಂದರ್, ಶಹಬಾಜ್ ನದೀಮ್ ಡಕೌಟ್ ಆಗಿ ಪೆವಿಲಿಯನ್ ಗೆ ಮರಳಿದರು. ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್ ಗಳಿಸಿದ್ದ ಪಂತ್ ಕೂಡ 11 ರನ್ ಗೆ ಔಟಾದರೇ, ಚೇತೇಶ್ವರ ಪೂಜಾರ 15 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಈ ಹಿನ್ನೆಲೆಯಲ್ಲಿ ಸತತ ಓವರ್‌ಗಳಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಟೀಮ್ ಇಂಡಿಯಾ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಇದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 192 ರನ್‌ಗಳಿಗೆ ಆಲೌಟ್‌ ಆಯಿತು. ಇಂಗ್ಲೆಂಡ್‌ ಪರ ಜ್ಯಾಕ್‌ ಲೀಚ್‌ 4 ವಿಕೆಟ್‌ ಪಡೆದರೆ, ಜೇಮ್ಸ್ ಅಂಡರ್ಸನ್‌ 3 ವಿಕೆಟ್‌ ಕಬಳಿಸಿದರು. ಇನ್ನುಳಿದಂತೆ ಜೋಫ್ರ ಆರ್ಚರ್‌, ಡಾಮ್‌ ಬೆಸ್‌ ಹಾಗೂ ಬೆನ್‌ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್‌ ಪಡೆದರು.

ಇನ್ನು ಇಂಗ್ಲೆಂಡ್ ಪರ ದ್ವಿಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಜೋ ರೂಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

- Advertisement -
spot_img

Latest News

error: Content is protected !!