Thursday, June 4, 2026
Homeಕರಾವಳಿಜಾತ್ರೆಯಿಂದ ತಂಗಿಗೆ ಐಸ್ ಕ್ರೀಂ ತರದಕ್ಕೆ ಹೆತ್ತವರ ಬೈಗುಳ: ಆತ್ಮಹತ್ಯೆಗೆ ಶರಣಾದ 9ನೇ ತರಗತಿ ಬಾಲಕ

ಜಾತ್ರೆಯಿಂದ ತಂಗಿಗೆ ಐಸ್ ಕ್ರೀಂ ತರದಕ್ಕೆ ಹೆತ್ತವರ ಬೈಗುಳ: ಆತ್ಮಹತ್ಯೆಗೆ ಶರಣಾದ 9ನೇ ತರಗತಿ ಬಾಲಕ

- Advertisement -
- Advertisement -

ಬಂಟ್ವಾಳ: ಜಾತ್ರೆಯಿಂದ ಮನೆಗೆ ತಡವಾಗಿ ಬಂದಿರುವುದಲ್ಲದೆ ತಂಗಿಗೆ ಐಸ್‌ಕ್ರೀಂ ತಂದಿರಲಿಲ್ಲ ಎಂದು ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಳ್ತಿಲ ಗ್ರಾಮದ ಚೆರ್ಕಳ ಎಂಬಲ್ಲಿ ನಡೆದಿದೆ.

ಶಂಭೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಬಾಳ್ತಿಲ ಗ್ರಾಮದ ಚೆರ್ಕಳದ ನಿವಾಸಿ ಹರ್ಷಿತ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!