Tuesday, May 7, 2024
Homeಕ್ರೀಡೆಬಾಕ್ಸಿಂಗ್​ ಡೇ ಟೆಸ್ಟ್​: ಮೊದಲ ದಿನದಾಟ ಆಸ್ಟ್ರೇಲಿಯಾ 195ಕ್ಕೆ ಆಲೌಟ್‌, ಭಾರತ 36/1

ಬಾಕ್ಸಿಂಗ್​ ಡೇ ಟೆಸ್ಟ್​: ಮೊದಲ ದಿನದಾಟ ಆಸ್ಟ್ರೇಲಿಯಾ 195ಕ್ಕೆ ಆಲೌಟ್‌, ಭಾರತ 36/1

spot_img
- Advertisement -
- Advertisement -

ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಅದ್ಭುತ ಬೌಲಿಂಗ್ ದಾಳಿಯನ್ನು ಸಂಘಟಿಸಿದ್ದು ಆಸಿಸ್‌ಗೆ ಆಘಾತ ನೀಡಿದೆ. ಭಾರತದ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆ ನೀರಸ ಉತ್ತರವನ್ನು ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ಗೆ ಆಲೌಟ್ ಆಗಿದೆ.

ಆಸೀಸ್‌ ಪರ ಮ್ಯಾಥ್ಯೂ ವೇಡ್ 30, ಮಾರ್ನಸ್ ಲಾಬು ಷೇನ್ 48, ಟ್ರಾವಿಸ್ ಹೆಡ್ 38 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.
ಭಾರತದ ಪರ ಜಸ್‌ಪ್ರೀತ್‌ ಬೂಮ್ರಾ 4, ಆರ್‌.ಅಶ್ವಿನ್‌ 3, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜ 1 ವಿಕೆಟ್‌ ಪಡೆದರು.

ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ ಮಯಂಕ್ ಅಗರವಾಲ್ ಅವರನ್ನು ರನ್‌ ಖಾತೆ ತೆರೆಯುವ ಮುನ್ನ ಮಿಚೆಲ್ ಸ್ಟಾರ್ಕ್ ಪೆವಿಲಿಯನ್‌ ಹಾದಿ ತೊರಿಸಿದರು.

ಬಳಿಕ ಕ್ರೀಸ್‌ಗೆ ಬಂದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಔಟಾಗದೆ (07), ಶುಭಮನ್ ಗಿಲ್ ಔಟಾಗದೆ (28) ರನ್‌ ಗಳಿಸಿದರು. ಮೊದಲ ದಿನದಾಟ ಅಂತ್ಯಕ್ಕೆ ಭಾರತ 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ.

ನಾಲ್ಕು ಪಂದ್ಯಗಳ ಬಾರ್ಡರ್‌-ಗಾವಸ್ಕರ್ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಸಾಧಿಸಿದ್ದಾರೆ. ಭಾರತವು ಈ ಪಂದ್ಯ ಗೆದ್ದು ಸಮಬಲ ಸಾಧಿಸಿದರೆ, ಸರಣಿ ಜಯದ ಆಸೆ ಜೀವಂತವಾಗುಳಿಯುತ್ತದೆಯಲ್ಲದೇ, ನಡೆಯುವ ಮೂರನೇ ಟೆಸ್ಟ್ ರೋಚಕವಾಗುತ್ತದೆ.

- Advertisement -
spot_img

Latest News

error: Content is protected !!