Wednesday, June 3, 2026
Homeಕರಾವಳಿಉಡುಪಿಶ್ರೀ ಕೃಷ್ಣ ವೃದ್ಧರ ಆಶ್ರಯಧಾಮ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಉದ್ಘಾಟನೆ

ಶ್ರೀ ಕೃಷ್ಣ ವೃದ್ಧರ ಆಶ್ರಯಧಾಮ ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ಉದ್ಘಾಟನೆ

- Advertisement -
- Advertisement -

ಉಡುಪಿ: ಮೂಡಬೆಟ್ಟು ಕೊಡವೂರಿನಲ್ಲಿರುವ ಶ್ರೀ ಕೃಷ್ಣ ವೃದ್ಧರ ಆಶ್ರಯಧಾಮವನ್ನು ಸಂಪರ್ಕಿಸುವ ಖಾಸಗಿ ಕಾಂಕ್ರಿಟ್ ರಸ್ತೆಯನ್ನು ಆಶ್ರಯಧಾಮದ ವ್ಯವಸ್ಥಾಪಕ ಶ್ರೀ ಕೃಷ್ಣಮೂರ್ತಿ ಆಚಾರ್ಯರ ಸಮ್ಮುಖದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಸದಸ್ಯ ಸನ್ಮಾನ್ಯ ಶ್ರೀ ಯಶಪಾಲ್ ಸುವರ್ಣ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ ವಿಜಯ ಕೊಡವೂರು, ಶ್ರೀ ಶ್ರೀಶ ಭಟ್ ಕೊಡವೂರು, ಫಲಿಮಾರು ಮಠದ ಶ್ರೀ ಶ್ರೀಶ ಭಟ್ ಕಡೆಕಾರು, ತು. ಶಿ. ಮಾ. ಮ ಉಡುಪಿ ಸಂಸ್ಥೆಯ ಶ್ರೀ ಜಯರಾಮ ಆಚಾರ್ಯ ಮಂಜುನಾಥ್ ರಾವ್ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು. ಬಳಿಕ ಆಶ್ರಮದ ನಿವಾಸಿಗಳನ್ನು ಭೇಟಿ ಮಾಡಿದ ಶಾಸಕರು ಅವರಿಗೆ ಸಾಂತ್ವನ ಹೇಳಿ ಆಶ್ರಮಕ್ಕೆ ತನ್ನಿಂದಾದ ಸಹಾಯವನ್ನು ಸರಕಾರದ ವತಿಯಿಂದ ಕೊಡಿಸುವುದಾಗಿ ಭರವಸೆ ನೀಡಿದರು. ಆಶ್ರಮದ ವತಿಯಿಂದ ಶಾಸಕರನ್ನು ಹಾಗೂ ನಗರಸಭಾ ಸದಸ್ಯರನ್ನು ಶ್ರೀ ಕೃಷ್ಣಮೂರ್ತಿ ಆಚಾರ್ಯರು ಶಾಲು ಹಾಕಿ ಸ್ಮರಣಿಕೆಯನ್ನಿತ್ತು ಗೌರವಿಸಿದರು.

- Advertisement -

Latest News

error: Content is protected !!