- Advertisement -
![]()
- Advertisement -
ಬೆಳ್ತಂಗಡಿ: ಮೊಗ್ರು ಗ್ರಾಮದ ದೇವರಡ್ಕ-ಕೊಳಬ್ಬೆ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮಾನ್ಯ ಶಾಸಕ ಹರೀಶ್ ಪೂಂಜಾರವರ 10ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕರ ಮಾಹಿತಿಯಂತೆ ಸ್ಥಳೀಯ ಜನಪ್ರತಿನಿಧಿಗಳಿಂದ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಗೌಡ, ಉಪಾಧ್ಯಕ್ಷರಾದ ಗಂಗಾಧರ್ ಪೂಜಾರಿ, ಸದಸ್ಯರದ ಬಾಲಕೃಷ್ಣ ಗೌಡ ಮುಗೇರಡ್ಕ, ಸಿ ಎ ಬ್ಯಾಂಕ್ ಅಧ್ಯಕ್ಷರದ ರಕ್ಷಿತ್ ಶೆಟ್ಟಿ ಪನೆಕ್ಕರ, ನಿರ್ದೇಶಕರಾದ ಉದಯ ಭಟ್ ಕೊಳಬ್ಬೆ, ಶೀಲಾವತಿ ಮುಗೇರಡ್ಕ, ಬೂತ್ ಸಮಿತಿ ಕಾರ್ಯದರ್ಶಿಗಳಾದ ರಮೇಶ್ ನೆಕ್ಕರಾಜೆ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಮಮತಾ ಕೆಲೆಂಜಿಮಾರು, ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಾಬು ಗೌಡ, ಕೇಶವ ಜಾಲ್ನದೆ,ಸ್ಥಳೀಯರದ ವಿನಯ್, ಸಿದ್ದ, ಗಣೇಶ್,ಹರೀಶ್, ಸುಬ್ಬಯ್ಯ, ಪ್ರವೀಣ್, ಸತೀಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
- Advertisement -


