Friday, May 17, 2024
Homeಕೊಡಗುಕೊಡಗಿನಲ್ಲಿ ಐರಾವತ ಬಸ್ ಅಪಘಾತ: ಚಾಲಕ ಸ್ಥಳದಲ್ಲೇ ಸಾವು

ಕೊಡಗಿನಲ್ಲಿ ಐರಾವತ ಬಸ್ ಅಪಘಾತ: ಚಾಲಕ ಸ್ಥಳದಲ್ಲೇ ಸಾವು

spot_img
- Advertisement -
- Advertisement -

ಮಡಿಕೇರಿ: ಐರಾವತ ಬಸ್ ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೆರುಂಬಾಡಿ ಗ್ರಾಮದ‌ ಬಳಿ ನಡೆದಿದೆ.‌ ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಅರಣ್ಯಕ್ಕೆ ನುಗ್ಗಿದೆ.‌ ಬಸ್ ಮರಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಚಾಲಕನ ಸಾವು ಸಂಭವಿಸಿದೆ ಅಪಘಾತವಾಗುತ್ತಿದ್ದಂತೆ ನೆರವಿಗೆ ಧಾವಿಸಿದ ಸ್ಥಳೀಯರು ಚಾಲಕನನ್ನು ಹೊರ ತೆಗೆಯಲು ಹರ ಸಾಹಸಪಟ್ಟಿದ್ದಾರೆ.‌ ಬೆಳಗ್ಗಿನ‌ ಜಾವ ಸಂಭವಿಸಿದ ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಬಸ್ ನ ಬ್ರೇಕ್ ವಿಫಲವಾಗಿ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಫಘಾತ ನಡೆದ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

- Advertisement -
spot_img

Latest News

error: Content is protected !!