Saturday, June 13, 2026
Homeಕರಾವಳಿಹತ್ತು ವರ್ಷಗಳ ಹಿಂದೆ ಕುಟುಂಬ ಸಿರಿಯಾ ಗೆ ತೆರಳಿ ನಾಪತ್ತೆ ಹಿನ್ನೆಲೆ ಶಂಕೆ : ಉಳ್ಳಾಲದ...

ಹತ್ತು ವರ್ಷಗಳ ಹಿಂದೆ ಕುಟುಂಬ ಸಿರಿಯಾ ಗೆ ತೆರಳಿ ನಾಪತ್ತೆ ಹಿನ್ನೆಲೆ ಶಂಕೆ : ಉಳ್ಳಾಲದ ಮಾಜಿ ಶಾಸಕ ದಿ‌ ಬಿ.ಎಂ‌ ಇದಿನಬ್ಬ ಮಗನ ಮನೆಗೆ ಎನ್ ಐ ಎ ದಾಳಿ

- Advertisement -
- Advertisement -

ಮಂಗಳೂರು :  ಉಳ್ಳಾಲದ ಮಾಜಿ ಶಾಸಕ ದಿ‌ ಬಿ.ಎಂ‌ ಇದಿನಬ್ಬ ಅವರ ಪುತ್ರನ ಮನೆಗೆ ಬುಧವಾರ ನಸುಕಿನ ಜಾವಕ್ಕೆ  ಬೆಂಗಳೂರಿನಿಂದ ಬಂದಿದ್ದ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.

 ಸಿರಿಯಾ ಮೂಲದ ಐಸಿಸ್ ಉಗ್ರರ ನಂಟಿನ ಹಿನ್ನಲೆಯಲ್ಲಿ ದಾಳಿ ನಡೆದಿದ್ದು ಹತ್ತು ವರ್ಷಗಳ ಹಿಂದೆ ಭಾಷ ಅವರ ಮೊಮ್ಮಗಳು ಐಸಿಸ್ ನಂಟಿನ ಹಿನ್ನಲೆಯಲ್ಲಿ ಸಿರಿಯಾ ತೆರಳಿದ್ದರು. ಈ ಕುರಿತು  ಪ್ರಕರಣ ದಾಖಲಾಗಿತ್ತು.ಭಾಷಾ ಅವರ ಮೊಮ್ಮಗಳು ಅಜ್ಮಲ್ , ಕಾಸರಗೋಡು ಮೂಲದ ಯುವಕನೊಂದಿಗೆ ಮದುವೆಯಾಗಿದ್ದು, ಸಿರಿಯಾ ಐಸಿಸ್ ಉಗ್ರರ ಸಂಪರ್ಕದಲ್ಲಿದ್ದ ಆಕೆಯ ಪತಿ ಮತ್ತು ಮಗುವಿನೊಂದಿಗೆ ನಾಪತ್ತೆಯಾಗಿದ್ದು ಇದೇ ಆಧಾರದ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಜ್ಮಲ್ ತನ್ನ ಕುಟುಂಬದ ಜೊತೆ ಸಿರಿಯಾ ತಲುಪಿ ಬಳಿಕ ನಾಪತ್ತೆಯಾಗಿರುವ ಸಾಧ್ಯತೆ ಇದೆ. ಇನ್ನು ಮಂಗಳೂರು ಡಿಸಿಪಿ ನೇತೃದಲ್ಲಿ ಸಿಸಿಬಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಭದ್ರತೆ ನೀಡಿ ಕಾರ್ಯಾಚರಣೆಗೆ ಸಾಥ್ ನೀಡುತ್ತಿದ್ದಾರೆ.

- Advertisement -

Latest News

error: Content is protected !!