Friday, June 26, 2026
Homeತಾಜಾ ಸುದ್ದಿಹಾಸನದಲ್ಲಿ ಪೆನ್ ಹಂಚಿಸಿದ್ದು ಬಿ.ವೈ. ವಿಜಯೇಂದ್ರ; ಬಿಎಸ್ವೈ ಸಿಎಂ ಆಗಿದ್ದಾಗ ಅವರ ಸಹಿ ಫೋರ್ಜರಿ ಮಾಡುತ್ತಿದ್ದರು;...

ಹಾಸನದಲ್ಲಿ ಪೆನ್ ಹಂಚಿಸಿದ್ದು ಬಿ.ವೈ. ವಿಜಯೇಂದ್ರ; ಬಿಎಸ್ವೈ ಸಿಎಂ ಆಗಿದ್ದಾಗ ಅವರ ಸಹಿ ಫೋರ್ಜರಿ ಮಾಡುತ್ತಿದ್ದರು; ಶಾಸಕ ಬಸವರಾಜ್ ಯತ್ನಾಳ್ ಗಂಭೀರ ಆರೋಪ

- Advertisement -
- Advertisement -

ಬೆಂಗಳೂರು; ಹಾಸನದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋದ ಪೆನ್ ಡ್ರೈ ಹಂಚಿದ್ದು ವಿಜಯೇಂದ್ರ. ಅಲ್ಲದೇ ಬಿಎಸ್ವೈ ಸಿಎಂ ಆಗಿದ್ದಾಗ ವಿಜಯೇಂದ್ರ ಅವರ ಸಹಿಯನ್ನು  ಫೋರ್ಜರಿ ಮಾಡುತ್ತಿದ್ದರು. ಬೇಕಾದ್ರೆ ಆ ಸಹಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತನಿಖೆ ನಡೆಸಲಿ. ಆಗ ಸತ್ಯ ಗೊತ್ತಾಗುತ್ತೆ ಎಂದು ಅವರು ವಿಜಯಪುರ ಶಾಸಕ ಬಸವರಾಜ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ವಿಜಯೇಂದ್ರ ಅವರು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕಿಸುತ್ತಿದ್ದಾರೆ. ಸುಳ್ಳು ಕೇಸ್ ಹಾಕುತ್ತಿರುವ ಬಗ್ಗೆಯೂ ತನಿಖೆ ಆಗಲಿ ಎಂದು ಹೇಳಿದ್ದಾರೆ. “ವಿಜಯೇಂದ್ರನ ಹಾಗೆ ನಾನು‌ ಸಿಡಿ ಗಳನ್ನು ಇಟ್ಟುಕೊಂಡಿಲ್ಲ. ವಿಜಯೇಂದ್ರನ‌ ಶಿಷ್ಯರು ಸಿಡಿ ಕಂಪನಿಯವರಿದ್ದಾರೆ’’ ಎಂದು ಅವರು ಆರೋಪಿಸಿದ್ದಾರೆ.

ನಾನು ಈಗ ಗಟ್ಟಿಯಾಗಿದ್ದೇನೆ, ಉಚ್ಚಾಟನೆ ಮಾಡಿದರೂ ಸಿದ್ದರಿದ್ದೇನೆ. ಅಷ್ಟೇ ಅಲ್ಲ, ಉಮೇಶ ಕಂಡಕ್ಟರ್ ಮನೆಯಲ್ಲಿ ಹಣ ಸಿಕ್ಕವು ಅದೆಲ್ಲವೂ ಎಲ್ಲಿ ಹೋಯಿತು. ಅದು ವಿಜಯೇಂದ್ರನ ದುಡ್ಡು’’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!