- Advertisement -
![]()
- Advertisement -
ಬೈಂದೂರು: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕುಂದಾಪುರ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ.ಕೆ ನೇತ್ರತ್ವದ ತಂಡ ಬೈಂದೂರು ಸಮೀಪದ ಯಡ್ತರೆ ಬಳಿ ವಶಕ್ಕೆ ಪಡೆದಿದೆ.
ಡಿವೈಎಸ್‌ಪಿ ಶ್ರೀಕಾಂತ. ಕೆ ಅವರು ಗಸ್ತಿನಲ್ಲಿದ್ದಾಗ ಶಿರೂರು ಕಡೆಯಿಂದ ಲಾರಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಯಡ್ತರೆ ಹೊಸ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ ಲಾರಿ ಹಾಗೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ 50 ಕೆ.ಜಿ ತೂಕದ 320 ಅಕ್ಕಿ ಚೀಲಗಳಲ್ಲಿ ಒಟ್ಟು 16 ಟನ್ ಅಕ್ಕಿ ಪತ್ತೆಯಾಗಿದೆ.ಚಾಲಕನ ಸೀಟಿನ ಬದಿಯಲ್ಲಿ 3 ಗೋಣಿ ಚೀಲಗಳು ಹಾಗೂ ಚೀಲ ಹೊಲಿಯುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


