Thursday, June 4, 2026
Homeಕರಾವಳಿಉಡುಪಿಬೈಂದೂರು: ಅಕ್ರಮ ಜಾನುವಾರು ಸಾಗಾಟ, ಖದೀಮರು ಪರಾರಿ !

ಬೈಂದೂರು: ಅಕ್ರಮ ಜಾನುವಾರು ಸಾಗಾಟ, ಖದೀಮರು ಪರಾರಿ !

- Advertisement -
- Advertisement -

ಬೈಂದೂರು: ಪೊಲೀಸರು ಯಡ್ತರೆ ಜಂಕ್ಷನ್ ಬಳಿ ಅಕ್ರಮ ಜಾನುವಾರು ಸಾಗಾಟವನ್ನು ತಡೆದು ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2 ಕರುಗಳನ್ನು ರಕ್ಷಿಸಿದ್ದಾರೆ.

ಕಾರಿನಲ್ಲಿ ತುಂಬಿಸಿಕೊಂಡು ಕಿರಿಮಂಜೇಶ್ವರ ಕಡೆಯಿಂದ ಬೈಂದೂರು ಕಡೆಗೆ ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಪವನ್ ನಾಯಕ್ ಅವರು ಯಡ್ತರೆ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗವಾಗಿ ಬಂದ ಕಾರನ್ನು ನಿಲ್ಲಿಸಿದರು. ಆಗ ಚಾಲಕನು ಕಾರನ್ನು ಯಡ್ತರೆ ಜಂಕ್ಷನ್ ನಿಂದ ಸ್ವಲ್ಪ ಹಿಂದೆ ನಿಲ್ಲಿಸಿ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ.

ಪೊಲೀಸರು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಎರಡು ಕರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡುಬಂದಿದೆ. 2 ಕರುಗಳನ್ನು ರಕ್ಷಿಸಲಾಗಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!