Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ರಸ್ತೆಯಲ್ಲೇ ಇಫ್ತಾರ್ ಕೂಟ ಆಯೋಜನೆ ಪ್ರಕರಣ; ಸಂಘಟಕರಿಗೆ ಚುನಾವಣಾ ಆಯೋಗ ನೋಟಿಸ್

ಮಂಗಳೂರು; ರಸ್ತೆಯಲ್ಲೇ ಇಫ್ತಾರ್ ಕೂಟ ಆಯೋಜನೆ ಪ್ರಕರಣ; ಸಂಘಟಕರಿಗೆ ಚುನಾವಣಾ ಆಯೋಗ ನೋಟಿಸ್

- Advertisement -
- Advertisement -

ಮಂಗಳೂರು; ರಸ್ತೆಯಲ್ಲೇ ಇಫ್ತಾರ್ ಕೂಟ ಆಯೋಜನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಘಟಕರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಇಫ್ತಾರ್ ಕೂಟಕ್ಕಾಗಿ ಮುಡಿಪು ಜಂಕ್ಷನ್ ಪ್ರದೇಶದಲ್ಲಿ ರಸ್ತೆಯ ಒಂದು ಬದಿಯಲ್ಲಿ ಕುರ್ಚಿಗಳು ಮತ್ತು ಆಹಾರ ತಟ್ಟೆಗಳ ಸಾಲುಗಳನ್ನು ಜೋಡಿಸಿರುವ ವೀಡಿಯೋ  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ವೀಡಿಯೋ ಆಧರಿಸಿ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ರೀತಿ ಕಾರ್ಯಕ್ರಮ ಆಯೋಜಿಸಿರೋದಕ್ಕೆ ಚುನಾವಣಾ ಆಯೋಗವು ಆಯೋಜಕ ಅಬೂಬಕರ್ ಎಂಬುವವರಿಗೆ ನೋಟಿಸ್ ನೀಡಿದೆ.

- Advertisement -

Latest News

error: Content is protected !!