ಧರ್ಮಸ್ಥಳ: ಸರ್ಕಾರಕ್ಕೆ ಧೈರ್ಯವಿದ್ರೆ ಮಸೀದಿ ಮುಂದೆ ನಿಂತು ಇದು ಮುಸ್ಲಿಂರದ್ದು ಅಲ್ಲ ಎನ್ನಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ನಮ್ಮ ನಡೆ ಧರ್ಮಸ್ಥಳ ಕಡೆ ಸಮಾವೇಶದ ಮುನ್ನ ಮಾತನಾಡಿದ ಆರ್ ಅಶೋಕ್ ನಾವು ಎಸ್ ಐಟಿ ಮಧ್ಯಂತರ ವರದಿಯನ್ನು ಕೇಳಿದ್ದೆವು. ಆದರೆ ಅವರು ವರದಿಯನ್ನು ನೀಡಿಲ್ಲ. ವರದಿ ನೀಡಿದ್ರೆ ಅದರಲ್ಲೇ ಹಲವು ವಿಚಾರ ಬಹಿರಂಗವಾಗುತ್ತೆ ಹಾಗಾಗಿ ವರದಿ ನೀಡಿಲ್ಲ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ವರದಿ ಈಗ್ಲೇ ಕೊಟ್ರೆ ಹಿಂದೂಗಳೆಲ್ಲಾ ತಿರುಗಿ ಬೀಳ್ತಾರೆ. ಸರ್ಕಾರದ ವೈಫಲ್ಯ ಬಯಲಾಗುತ್ತದೆ ಹಾಗಾಗಿ ವರದಿ ನೀಡಿಲ್ಲ. ಇದು ಧರ್ಮ ಅಧರ್ಮದ ವಿರುದ್ಧ ಹೋರಾಟ. ಧರ್ಮದ ಪರ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಧೈರ್ಯ ಇದ್ರೆ ಮಸೀದಿ ಮುಂದೆ ನಿಂತು ಇದು ಮುಸ್ಲಿಂರದ್ದು ಅಲ್ಲ ಎನ್ನಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಸವಾಲು ಹಾಕಿದ್ದಾರೆ.
ಪ್ರಕರಣವನ್ನು ಎನ್ ಐ ಎ ತನಿಖೆಗೆ ನೀಡಬೇಕು ಎಂದು ಇದೇ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ.


