Monday, June 29, 2026
Homeಕರಾವಳಿವಿದೇಶದಲ್ಲಿ ಅಕ್ರಮ ಆಸ್ತಿ ಸಂಪಾದನೆ :  ಮಂಗಳೂರಿನ ಉದ್ಯಮಿಯ ಕೋಟ್ಯಾಂತರ ರೂಪಾಯಿ ಆಸ್ತಿ ಜಪ್ತಿ ಮಾಡಿದ...

ವಿದೇಶದಲ್ಲಿ ಅಕ್ರಮ ಆಸ್ತಿ ಸಂಪಾದನೆ :  ಮಂಗಳೂರಿನ ಉದ್ಯಮಿಯ ಕೋಟ್ಯಾಂತರ ರೂಪಾಯಿ ಆಸ್ತಿ ಜಪ್ತಿ ಮಾಡಿದ ಇಡಿ

- Advertisement -
- Advertisement -

ಮಂಗಳೂರು: ವಿದೇಶಿದಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಮಂಗಳೂರಿನ ಉದ್ಯಮಿಯೊಬ್ಬರ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.


ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಷರೀಫ್ ಮೆರೈನ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಂಗಳೂರಿನ ನಿವಾಸಿ ಇಕ್ಬಾಲ್ ಅಹ್ಮದ್ ಅವರು ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಸ್ಥಿರಾಸ್ತಿ ಸಂಪಾದಿಸಿದ್ದ ಆರೋಪದ ಮೇಲೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

 ದುಬೈನ ಯುಎಇ ನಲ್ಲಿ 53.09 ಲಕ್ಷ ರೂ.ಯುಎಇ ದಿರಂಗಳ (ಭಾರತದ 8.3 ಕೋಟಿ ರೂಪಾಯಿ) ಸ್ಥಿರಾಸ್ತಿ ಸಂಪಾದಿಸಿದ್ದರು. ಇದು ಫೆಮಾದ ಸೆಕ್ಷನ್ 4ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನಲೆ ಮಂಗಳೂರಿನ ಅತ್ತಾವರದ ಇಕ್ಬಾಲ್ ಅಹ್ಮದ್ ಅವರಿಗೆ ಸೇರಿದ 8.3 ಕೋಟಿ ರೂ. ಮೌಲ್ಯದ ಮನೆಯನ್ನು ಜಪ್ತಿ ಮಾಡಿದ್ದಾರೆ.

- Advertisement -

Latest News

error: Content is protected !!