Friday, June 5, 2026
Homeತಾಜಾ ಸುದ್ದಿದೆಹಲಿ ಭೇಟಿ ಬೆನ್ನಲ್ಲೇ ನಾನು ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಟಪಡಿಸಿದ ವಿ ಸೋಮಣ್ಣ

ದೆಹಲಿ ಭೇಟಿ ಬೆನ್ನಲ್ಲೇ ನಾನು ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಟಪಡಿಸಿದ ವಿ ಸೋಮಣ್ಣ

- Advertisement -
- Advertisement -

ನವದೆಹಲಿ ಭೇಟಿ ಬೆನ್ನಲ್ಲೇ ನಾನು ಕಾಂಗ್ರೆಸ್ ಸೇರಲ್ಲ ಎಂದು ಸಚಿವ ವಿ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಸಚಿವ ವಿ.ಸೋಮಣ್ಣ ಇಂದು ದೆಹಲಿಗೆ ಭೇಟಿ ನೀಡಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸೋಮಣ್ಣ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಪಾರ್ಲಿಮೆಂಟ್ನಲ್ಲಿ ಭೇಟಿ ಮಾಡಿದ್ದೇನೆ . ಇದು ವೈಯಕ್ತಿಕ ಭೇಟಿ ಅಲ್ಲ, ಪಕ್ಷದ ಕೆಲಸಕ್ಕೆ ಹೋಗಿದ್ದೇನೆ ಎಂದರು. ನನ್ನ ಇಲಾಖೆ ಕೆಲಸದ ವಿಚಾರವಾಗಿ ಇಲ್ಲಿಗೆ ಬಂದಿದ್ದೆ. ನಾನು ಬಂದ ಕೆಲಸ ಯಾವುದೇ ಸಮಸ್ಯೆ ಇಲ್ಲದೇ ಆಗಿದೆ. ಇದಕ್ಕೆ ಬೇಕಾದ ವಿಷಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ ಎಂದರು.

ಇನ್ಮುಂದೆ ತೇಜೋವಧೆ ಮಾಡಬೇಡಿ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೇ ಎಲ್ಲಾ ಊಹಾಪೋಹಗಳಿಗೆ ಸಚಿವ ಸೋಮಣ್ಣ ತೆರೆ ಎಳೆದಿದ್ದಾರೆ.

- Advertisement -

Latest News

error: Content is protected !!