Friday, April 19, 2024
Homeತಾಜಾ ಸುದ್ದಿಪ್ರೀತಿಸಿ ಮದುವೆಯಾಗಿ ಮಕ್ಕಳಾದ ಬಳಿಕ ಜಾತಿ ನೆಪ ಹೇಳಿ ಪತ್ನಿಯನ್ನು ಬೇಡ ಎಂದ ಪತಿ

ಪ್ರೀತಿಸಿ ಮದುವೆಯಾಗಿ ಮಕ್ಕಳಾದ ಬಳಿಕ ಜಾತಿ ನೆಪ ಹೇಳಿ ಪತ್ನಿಯನ್ನು ಬೇಡ ಎಂದ ಪತಿ

spot_img
- Advertisement -
- Advertisement -

ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ನೆಪ ಹೇಳಿ ಪತ್ನಿ ಹಾಗೂ ಇಬ್ಬರು ಪುಟ್ಟ ಕಂದಮ್ಮಗಳನ್ನು ಪತಿ ಮನೆಯಿಂದ ಹೊರ ಹಾಕಿರುವ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.

5 ವರ್ಷದ ಹಿಂದೆ ಬಂಗಾರಪೇಟೆ ತಾಲೂಕಿನ ದೊಡ್ಡ ಚಿನ್ನಹಳ್ಳಿಯ ಸುನಿಲ್, ಚಿಕ್ಕ ಅಂಕಂಡಹಳ್ಳಿಯ ಕಾವ್ಯ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 4 ವರ್ಷದ ಹಾಗೂ 9 ತಿಂಗಳ ಎರಡು ಗಂಡು ಮಕ್ಕಳಿವೆ. ಈ ಮಧ್ಯೆ ಪತಿ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್, ಮತ್ತೊಂದು ಮದುವೆಯಾಗಿದ್ದಾನೆ ಎಂದು ಕಾವ್ಯಾ ಆರೋಪಿಸಿದ್ದಾರೆ. ಹೀಗಾಗಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಹಾಯ ಪಡೆದು ಪತಿಯ ಮನೆ ಎದುರು ಮನೆಗೆ ಸೇರಿಸಿಕೊಳ್ಳುವಂತೆ ಬೇಡಿಕೊಂಡಿದ್ದಾರೆ.

ಕಾಲಿಗೆ ಬೀಳುವೆ, ಕೈ ಮುಗಿಯುವೆ ಅಂದರೂ ಜಾತಿ ನೆಪ ಹೇಳಿ ಗಂಡನ ಮನೆಯವರು ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ನೊಂದ ಮಹಿಳೆ ಕೆಲಕಾಲ ಗಂಡನೆ ಮನೆ ಎದುರು ಪ್ರತಿಭಟನೆ ಮಾಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ. ಪತಿ ಸುನಿಲ್ ಮದುವೆಯಾಗಿ ಮೋಸ ಮಾಡಿದ್ದು, ಜಾತಿ ನೆಪದಲ್ಲಿ ನನ್ನನ್ನು ನಿರಾಕರಿಸುತ್ತಿದ್ದಾನೆ ಎಂದು ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕಾವ್ಯ ದೂರು ನೀಡಿದ್ದಾಳೆ.

- Advertisement -
spot_img

Latest News

error: Content is protected !!