Thursday, June 4, 2026
Homeತಾಜಾ ಸುದ್ದಿಪಿಎಸ್‌ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ ಪತಿ;  ಗಂಡ ಇರುವ ಜೈಲಿಗೆ ಪತ್ನಿಯೇ ಜೈಲರ್

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ ಪತಿ;  ಗಂಡ ಇರುವ ಜೈಲಿಗೆ ಪತ್ನಿಯೇ ಜೈಲರ್

- Advertisement -
- Advertisement -

ಬೆಂಗಳೂರು; ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ‌. ಕಲಬುರಗಿಯ ಜೈಲಿನ ಜೈಲರ್ ತನ್ನ ಪತಿಯನ್ನು ಜೈಲಿಗೆ ಹಾಕಿ ಲಾಕ್ ಮಾಡುವ ದುರ್ದೈವ ಒದಗಿ ಬಂದಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮಾಂಡಂಟ್‌ ವೈಜನಾಥ್ ಬಿರಾದರ್ ಅನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವೈಜನಾಥ್ ಬಿರಾದರ್ ಪತ್ನಿ ಸುನಂದಾ ರೇವೂರ್ ಕಲಬುರಗಿ ಜೈಲಿನಲ್ಲಿ ಜೈಲರ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಎಸ್‌ಆರ್‌ಪಿಯಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿರುವ ವೈಜನಾಥ್ ಬಿರಾದರ್ ‌ನ್ನು ಇದೇ ಜೈಲಿಗೆ ಹಾಕಲಾಗಿದೆ. ಹಾಗಾಗಿ ಪತಿ ಜೈಲಿರುವಾಗ ಅವರ ಮುಂದೆಯೇ ತಾನು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಸುನಂದಾ ರೇವೂರ್ ಅವರಿಗೆ ಒದಗಿ ಬಂದಿದೆ.

- Advertisement -

Latest News

error: Content is protected !!