Wednesday, June 24, 2026
Homeತಾಜಾ ಸುದ್ದಿಹಣದ ಹಿಂದೆ ಬಿದ್ದು, ಲೈಫ್ ಹಾಳು ಮಾಡಿಕೊಂಡೆ: ಜೈಲಿನಿಂದ ಹೊರ ಬಂದ ಮೇಲೆ ಅನಾಥಾಶ್ರಮ ಕಟ್ಟುತ್ತೇನೆ:...

ಹಣದ ಹಿಂದೆ ಬಿದ್ದು, ಲೈಫ್ ಹಾಳು ಮಾಡಿಕೊಂಡೆ: ಜೈಲಿನಿಂದ ಹೊರ ಬಂದ ಮೇಲೆ ಅನಾಥಾಶ್ರಮ ಕಟ್ಟುತ್ತೇನೆ: ಸಿಐಡಿ ಮುಂದೆ ದಿವ್ಯಾ ಹಾಗರಗಿ ಪಶ್ಚಾತ್ತಾಪದ ಹೇಳಿಕೆ

- Advertisement -
- Advertisement -

ಬೆಂಗಳೂರು : ಪಿಎಸ್ ಐ ಅಕ್ರಮ ನೇಮಕಾತಿಗೆ ಪ್ರಕರಣದ ಆರೋಪಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ರು. ಹಲವು ದಿನ ಕಸ್ಟಡಿಯಲ್ಲಿದ್ದ ದಿವ್ಯಾ ಹಾಗರಗಿ ಸಿಐಡಿ ಮುಂದೆ ನೀಡಿರುವ ಹೇಳಿಕೆ ಇದೀಗ ಲಭ್ಯವಾಗಿದೆ. ಹಣದ ಹಿಂದೆ ಬಿದ್ದು, ಲೈಫ್ ಹಾಳು ಮಾಡಿಕೊಂಡೆ ಸಾರ್ ಎಂದು ಸಿಐಡಿ ವಿಚಾರಣೆ ವೇಳೆ ದಿವ್ಯಾ ಹಾಗರಗಿ ಹೇಳಿಕೆ ಕೊಟ್ಟಿದ್ದಾರೆ. ಲಕ್ಷ ಲಕ್ಷ ಹಣ ಬರುತ್ತೆ ಎಂದು ಇಂತಹ ತಪ್ಪು ಕೆಲಸ ಮಾಡಿದೆ. ನಾನು ಮಾಡಿದ್ದು ದೊಡ್ಡ ತಪ್ಪು ಅದಕ್ಕಾಗಿ ಪಶ್ಚಾತ್ತಾಪ ಇದೆ. ಪ್ರಾಮಾಣಿಕರ ಭವಿಷ್ಯ ಹಾಳು ಮಾಡಿ ಬಿಟ್ಟೇ ದಯವಿಟ್ಟು ಕ್ಷಮಿಸಿ ಬಿಡಿ ಸಾರ್. ಆರೋಪಿಗಳಾಗಿರುವ ಮಂಜುನಾಥ್,ಕಾಶೀನಾಥ್ ಮಾತು ಕೇಳಿ ನನ್ನ ಜೀವನ ಹಾಳಾಯ್ತು ಎಂದ ದಿವ್ಯಾ ಹಾಗರಗಿ ನಾನು ಬುದ್ಧಿ ಕಲಿಯಲು ಸಿಐಡಿ ಬಂಧನವೊಂದೆ ಸಾಕು ಸಾರ್ ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಪ್ರತಿನಿತ್ಯ ತಪ್ಪು ಮಾಡಿ ಬಿಟ್ಟೇ ಎಂದು ಕಣ್ಣೀರು ಹಾಕುತ್ತಿದ್ದ ದಿವ್ಯಾ ಹಾಗರಗಿ ಜೈಲಿನಿಂದ ಬಂದ ಮೇಲೆ ಅನಾಥಾಶ್ರಮ ಕಟ್ಟುತ್ತೇನೆ. ನನ್ನ ಬಂಧಿಸಿ ನನ್ನ ಮನಃ ಪರಿವರ್ತನೆಗೆ ಸಹಕಾರ ನೀಡಿದ ಸಿಐಡಿ ಅಧಿಕಾರಿಗಳಿಗೆ ಧನ್ಯವಾದಗಳು. ಅನಾಥಾಶ್ರಮವನ್ನು ಇದೇ ಸಿಐಡಿ ಅಧಿಕಾರಿಗಳ ಕೈಯಲ್ಲೇ ಉದ್ಘಾಟನೆ ಮಾಡಿಸುತ್ತೇನೆ ಎಂದು ಹೇಳಿದ್ದಾಳೆ. ಈ ಅವಮಾನ ಎಲ್ಲವೂ ಸಾಕು ಸಾರ್. ನಾನು ಮುಂದಿನ ದಿನಗಳಲ್ಲಿ ಒಳ್ಳೆಯವಳಾಗಿ ಬಾಳುತ್ತೇನೆ. ಮತ್ತೆ ಅನಾಥಾಶ್ರಮ ಕಟ್ಟಿ ಜನಸೇವೆ ಮಾಡುತ್ತೇನೆ ಎಂದು ಸಿಐಡಿ ತನಿಖಾಧಿಕಾರಿಗಳ ಮುಂದೆ ದಿವ್ಯಾ ಹಾಗರಗಿ ಸುದೀರ್ಘ ಹೇಳಿಕೆ ನೀಡಿದ್ದಾಳೆ..

- Advertisement -

Latest News

error: Content is protected !!