ತಿರುವನಂತಪುರಂ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲೇ ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಕೇರಳದಲ್ಲಿ ನಡೆದಿದೆ.
ಕೊಟ್ಟಾಯಂನಲ್ಲಿ ದಂಪತಿ ವಾಸವಾಗಿದ್ದು, ಪತಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ರಾತ್ರಿಪಾಳಿ ಕೆಲಸಕ್ಕೆ ಹೆಚ್ಚಾಗಿ ಹೋಗುತ್ತಿದ್ದು ಪತ್ನಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಈ ವೇಳೆ ಆಕೆ ಹೆಚ್ಚಾಗಿ ಫೇಸ್ಬುಕ್ನಲ್ಲಿ ಕಾಲ ಕಳೆಯುತ್ತಿದ್ದು, ಆಕೆಯ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಇದನ್ನು ಗಮನಿಸಿದ ಪತಿ ಎಚ್ಚರಿಕೆ ಕೂಡ ನೀಡಿದ್ದಾನೆ.
ಆದರೆ ಪತ್ನಿ ಫೇಸ್ಬುಕ್ನಲ್ಲಿ ಅದೇ ಏರಿಯಾದ ವ್ಯಕ್ತಿಯನ್ನು ಪರಿಚಯಿಸಿಕೊಂಡಿದ್ದು, ಇಬ್ಬರ ನಡುವೆ ಗೆಳೆತನ ಬೆಳೆದು ಅಕ್ರಮ ಸಂಬಂಧಕ್ಕೆ ತಿರುಗಿದೆ. ಪತಿ ರಾತ್ರಿ ಪಾಳಿ ಕೆಲಸಕ್ಕೆ ಹೋಗುತ್ತಿದ್ದಂತೆ ಮನೆಗೆ ಬರುತ್ತಿದ್ದ ಪ್ರಿಯಕರನೊಂದಿಗೆ ಪತ್ನಿ ಸರಸವಾಡುತ್ತಿದ್ದಳು. ಒಮ್ಮೆ ಕೆಲಸಕ್ಕೆ ಹೋದ ಪತಿ ಪತ್ನಿಗೆ ಫೋನ್ ಮಾಡಿದರೂ ರಿಸೀವ್ ಮಾಡಿರಲಿಲ್ಲ. ಮರುದಿನ ಮನೆಗೆ ಬಂದ ಆತ ವಿಚಾರಿಸಿದಾಗ ಸರಿಯಾಗಿ ಉತ್ತರ ಕೂಡ ನೀಡಿಲ್ಲ. ಇದರಿಂದ ಅನುಮಾನಗೊಂಡ ಪತಿ ಮರುದಿನ ರಾತ್ರಿ ಕೆಲಸಕ್ಕೆ ಹೋದ ಕೆಲ ಸಮಯದ ಬಳಿಕ ಮನೆಗೆ ವಾಪಸ್ ಬಂದಿದ್ದಾನೆ.
ಈ ವೇಳೆ ಕಿಟಕಿಯಲ್ಲಿ ನೋಡಿದಾಗ ಪತ್ನಿ, ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ದೃಶ್ಯ ಕಂಡಿದೆ. ಅಕ್ಕಪಕ್ಕದವರನ್ನು ಕರೆದು ಮನೆಯೊಳಗೆ ಹೋದ ಪತಿ, ಆಕ್ರೋಶದಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹಿಡಿದು ಥಳಿಸಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.