Saturday, June 6, 2026
HomeUncategorizedಅಗಲಿದ ಪತ್ನಿಯ ಪ್ರತಿಮೆ ನಿರ್ಮಿಸಿ, ತಮ್ಮ ಮನೆಯ ಗೃಹಪ್ರವೇಶ ಮಾಡಿದ ಪತಿ...

ಅಗಲಿದ ಪತ್ನಿಯ ಪ್ರತಿಮೆ ನಿರ್ಮಿಸಿ, ತಮ್ಮ ಮನೆಯ ಗೃಹಪ್ರವೇಶ ಮಾಡಿದ ಪತಿ…

- Advertisement -
- Advertisement -

ಕೊಪ್ಪಳ : ಉದ್ಯಮಿಯೊಬ್ಬರು ಮೂರು ವರ್ಷಗಳ ಹಿಂದೆ ಮೃತಪಟ್ಟ ತಮ್ಮ ಪತ್ನಿಯನ್ನೇ ಹೋಲುವ ಪ್ರತಿಮೆಯನ್ನು ತಮ್ಮ ಗೃಹಪ್ರವೇಶ ಸಮಾರಂಭಕ್ಕಾಗಿ ಮರುಸೃಷ್ಟಿಸುವ ಮೂಲಕ ತಮ್ಮ ಪತ್ನಿಯ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಅಂದ್ಹಾಗೆ ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ ಹಾಗೂ ಅವರ ಪತ್ನಿ ವೆಂಕಟನಾಗ ಮಾಧವಿ ಸುಸಜ್ಜಿತ ಮನೆಯೊಂದನ್ನು ನಿರ್ಮಿಸುವ ಕನಸು ಕಂಡಿದ್ದರು. ಆದರೆ ಮೂರು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ವೆಂಕಟನಾಗ ಮಾಧವಿ ಮೃತಪಟ್ಟಿದ್ದರು. ಪತ್ನಿಯ ಆಸೆಯನ್ನು ನೆರವೇರಿಸಬೇಕು ಎಂಬ ಕಾರಣಕ್ಕೆ ಶ್ರೀನಿವಾಸ ಗುಪ್ತಾ ಮನೆಯೊಂದನ್ನು ನಿರ್ಮಿಸಿ, ಗೃಹ ಪ್ರವೇಶದ ಸಂದರ್ಭದಲ್ಲಿ ನಿಜ ಮನುಷ್ಯರಂತೆ ಕಾಣುವ ಪತ್ನಿಯ ಪುತ್ಥಳಿಯನ್ನು ಮಾಡಿಸಿದ್ದಾರೆ. ಪುತ್ಥಳಿಯೊಂದಿಗೆ ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ.

ಇನ್ನು ಪ್ರತಿಮೆ ನೋಡಿವರು ಯೂರು ಕೂಡ ಇದು ಪ್ರತಿಮೆ ಎಂದು ಊಹಿಸಲು ಸಾಧ್ಯವೇ ಇಲ್ಲ. ಅಷ್ಟು ನೈಜವಾಗಿ ಮೂಡಿ ಬಂದಿದೆ. ಈ ಪ್ರತಿಮೆಯನ್ನು ಬೆಂಗಳೂರಿನ ಬೊಂಬೆಮನೆಯವರು ತಯಾರಿಸಿದ್ದಾರೆ.

ಅಗಲಿದ ಪತ್ನಿಯ ಪ್ರತಿಮೆ ನಿರ್ಮಿಸಿ, ತಮ್ಮ ಮನೆಯ ಗೃಹಪ್ರವೇಶ ಮಾಡಿದ ಪತಿ…

Posted by Maha Xpress on Monday, 10 August 2020

- Advertisement -

Latest News

error: Content is protected !!