Saturday, June 6, 2026
Homeತಾಜಾ ಸುದ್ದಿಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ವೇಳೆ ಶೊಟೌಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ವೇಳೆ ಶೊಟೌಟ್

- Advertisement -
- Advertisement -

ವಾಷಿಂಗ್​ಟನ್​: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಶ್ವೇತ ಭವನದ ಎದುರಿನಲ್ಲೇ ಶಸ್ತ್ರಾಸ್ತ ಹೊಂದಿದ್ದ ವ್ಯಕ್ತಿಯೊಬ್ಬನ ಮೇಲೆ ಅಮೆರಿಕಾ ಸೀಕ್ರೆಟ್​ ಸರ್ವಿಸ್ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೆ.

ಪೆನ್ಸಿಲ್ವೆನಿಯಾ ಅವೆನ್ಯೂನ 17ನೇ ರಸ್ತೆಯ ಬಳಿ ಫೈರಿಂಗ್ ನಡೆದಿದೆ. ತಕ್ಷಣ ಎಚ್ಚೆತ್ತುಕೊಂಡ ಬೆಂಗಾವಲು ಪಡೆಯು ಡೊನಾಲ್ಡ್ ಟ್ರಂಪ್ ಅವರನ್ನು ಸ್ಥಳದಿಂದ ರಕ್ಷಿಸಿ ಬೇರೆಡೆಗೆ ಕರೆದೊಯ್ಡಿದ್ದಾರೆ.

ಘಟನೆ ನಡೆದು ಕೆಲವು ಗಂಟೆಗಳಲ್ಲೇ ಮತ್ತೆ ಟ್ರಂಪ್ ಸುದ್ದಿಗೋಷ್ಠಿ ನಡೆಸಿರುವ ಅಧ್ಯಕ್ಷ ಟ್ರಂಪ್ ಅವರು, ಶ್ವೇತ ಭವನದ ಹೊರಗೆ ಶೂಟ್​ ಔಟ್ ಆಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ಗೆ ಧನ್ಯವಾದ ಹೇಳುತ್ತೇನೆ. ದೊಡ್ಡ ಅನಾಹುತವನ್ನು ಅವರು ಕ್ಷಿಪ್ರವಾಗಿ ತಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ಧಾರೆ. ಯಾರನ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುಶಃ ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ ಹೊಡೆದುರುಳಿಸಿದ ಬಂದೂಕುಧಾರಿ ವ್ಯಕ್ತಿಯೇ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -

Latest News

error: Content is protected !!