Friday, June 5, 2026
Homeತಾಜಾ ಸುದ್ದಿಎಳೆನೀರು ಕುಡಿಯೋದು ಯಾರೋ..ಆದ್ರೆ ದೂರು ಮಾತ್ರ ಮಂಗಣ್ಣನಿಗೆ ಈ ವಿಡಿಯೋ ನೋಡಿ ನಿಜವಾದ ಕಳ್ಳರು ಯಾರು...

ಎಳೆನೀರು ಕುಡಿಯೋದು ಯಾರೋ..ಆದ್ರೆ ದೂರು ಮಾತ್ರ ಮಂಗಣ್ಣನಿಗೆ ಈ ವಿಡಿಯೋ ನೋಡಿ ನಿಜವಾದ ಕಳ್ಳರು ಯಾರು ಅಂತಾ ಗೊತ್ತಾಗುತ್ತೆ..

- Advertisement -
- Advertisement -

ತೆಂಗು ಬೆಳೆಗಾರರಲ್ಲಿ ನೀವು ತೆಂಗಿನ ಬೆಳೆ ಹೇಗಿದೆ ಅಂತಾ ಪ್ರಶ್ನೆ ಕೇಳಿದ್ರೆ, ಅಯ್ಯೋ! ಎಲ್ಲಾ ಮಂಗಗಳ ಪಾಲು ಅನ್ನೋರೇ ಜಾಸ್ತಿ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಉತ್ತರ ಸರ್ವೇ ಸಾಮಾನ್ಯ. ಎಲ್ಲರೂ ಬೊಟ್ಟು ಮಾಡಿ ತೋರಿಸೋದು ಮಂಗಗಳನ್ನೇ. ಆದ್ರೆ ಕಳ್ಳರು ಬೇರೆಯವರೂ ಇರ್ತಾರೆ ಅಂತಾ ಈ ವಿಡಿಯೋ ನೋಡಿದ್ರೆ ನಿಮ್ಗೆ ಗೊತ್ತಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಗಿಳಿ ಜಾತಿಗೆ ಸೇರಿದ ಪಕ್ಷಿಯೊಂದು ತೆಂಗಿನ ಮರದ ಎಳೆನೀರು ಕಿತ್ತು ಕುಡಿಯುತ್ತಿರುವ ವೈರಲ್ ಆಗಿದೆ. ಇದನ್ನು ನೋಡಿದವರೆಲ್ಲಾ ಪಕ್ಷಿಗಳು ಕೂಡ ಹೀಗೆ ಮಾಡ್ತಾವಾ ಅಂತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಳೆನೀರನ್ನು ಯಾರು ಇಷ್ಟ ಪಡುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ

ಎಳೆನೀರು‌ ಕುಡಿಯೋದು‌ ಯಾರೋ.. ಆದ್ರೆ ದೂರು‌ ಮಾತ್ರ ಮಂಗನಿಗೆ..

Posted by Maha Xpress on Monday, 10 August 2020

- Advertisement -

Latest News

error: Content is protected !!