Saturday, June 6, 2026
Homeಕರಾವಳಿನಿಂತಿಕಲ್ಲು ಭೀಕರ ವಿದ್ಯುತ್ ಅವಘಡದಲ್ಲಿ ಸಜೀವ ದಹನವಾಗಿದ್ದ ವ್ಯಕ್ತಿಯ ಗುರುತು ಪತ್ತೆ

ನಿಂತಿಕಲ್ಲು ಭೀಕರ ವಿದ್ಯುತ್ ಅವಘಡದಲ್ಲಿ ಸಜೀವ ದಹನವಾಗಿದ್ದ ವ್ಯಕ್ತಿಯ ಗುರುತು ಪತ್ತೆ

- Advertisement -
- Advertisement -

ಕಡಬ: ಭಾರಿ ಮಳೆಗೆ ವಿದ್ಯುತ್ ತಂತಿಯೊಂದು ಕಡಿದು ಮಾರ್ಗಕ್ಕೆ ಬಿದ್ದಿದ್ದು, ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನಿಗೆ ತಂತಿ ತಾಗಿ ಸವಾರ ಸ್ಥಳದಲ್ಲೆ ಸಜೀವ ದಹನವಾದ ಘಟನೆ ನಿಂತಿಕಲ್ಲು ಸಮೀಪದ ಕಲ್ಲೇರಿಯ ಗುಳಿನಕಟ್ಟೆಯ ಬಳಿ ನಡೆದಿದೆ.

ಬೆಳಗ್ಗೆ ಸುಮಾರು 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಮೃತರನ್ನು ಮಂಡೆಕೋಲು ಗ್ರಾಮದ ಮೈತಡ್ಕದ ತಿಮ್ಮಪ್ಪ ಗೌಡರ ಪುತ್ರ ಉಮೇಶ್ (45 ವರ್ಷ) ಎಂದು ಗುರುತಿಸಲಾಗಿದೆ.

ಮೃತ ಉಮೇಶ್

ನಿನ್ನೆ ಬಳ್ಪ ಗ್ರಾಮದ ಆಲ್ಕಬೆಯಲ್ಲಿರುವ ತನ್ನ ಪತ್ನಿ ಮನೆಗೆ ಬಂದಿದ್ದ ಇವರು, ಬೆಳಿಗ್ಗೆ ತನ್ನ ಮನೆಯಲ್ಲಿ ಹಾಲು ಕರೆಯಲು ಇದೆ ಎಂದು ಬೆಳಗ್ಗೆ 4.30ರ ಸುಮಾರಿಗೆ ಇಲ್ಲಿಂದ ಹೊರಟು ಹೋಗಿದ್ದರು ಎನ್ನಲಾಗುತ್ತಿದೆ.

ಹಾಗಾಗಿ ಘಟನಾ ಸ್ಥಳಕ್ಕೆ 5 ಗಂಟೆ ವೇಳೆಗೆ ಸುಮಾರಿಗೆ ತಲುಪಿರಬಹುದು ಸಾಧ್ಯತೆ ಇದೆ. ಸುಮಾರು 4 ವರ್ಷಗಳ ಹಿಂದೆ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!