Thursday, June 4, 2026
Homeಕರಾವಳಿಬಂಟ್ವಾಳ: ಟಿಕ್‌ಟಾಕ್ ವಿಡಿಯೋ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನಾಲ್ವರು ಅರೆಸ್ಟ್

ಬಂಟ್ವಾಳ: ಟಿಕ್‌ಟಾಕ್ ವಿಡಿಯೋ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನಾಲ್ವರು ಅರೆಸ್ಟ್

- Advertisement -
- Advertisement -

ಬಂಟ್ವಾಳ: ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಓಡಾಟ ನಡೆಸಿ, ಅಸಭ್ಯರೀತಿಯಲ್ಲಿ ಟಿಕ್ ಟಾಕ್ ಮಾಡಿ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಸಜೀಪ ನಿವಾಸಿಗಳಾದ ಮಸೂದ್, ಅಜೀಮ್, ಅಬ್ದುಲ್ ಲತೀಪ್ ಹಾಗೂ ಅರ್ಪಾಜ್ ಬಂಧಿತ ಆರೋಪಿಗಳು.

ಶಿವನ ಢಮರುಗ ಮತ್ತು ತ್ರಿಶೂಲ ಇರುವ ಧ್ವಜ ಪೀಠದಲ್ಲಿ ಶೂ ಧರಿಸಿ ಕುಣಿದಿದ್ದಲ್ಲದೆ ವ್ಯಂಗ್ಯವಾಗಿ ಚಿತ್ರಿಸಿ ವಿಡಿಯೋ ಮಾಡಿದ್ದರು. ಆರೋಪಿಗಳು ಹಿಂದುಗಳ ಪವಿತ್ರ ಜಾಗದಲ್ಲಿ ಇಂಥ ವಿಡಿಯೋ ಮಾಡಿದ್ದು ಹಿಂದುಗಳ ಭಾವನೆಯನ್ನು ಘಾಸಿಗೊಳಿಸಿದ್ದಾಗಿ ರುದ್ರಭೂಮಿಯ ಅಧ್ಯಕ್ಷರು ದೂರು ದಾಖಲಿಸಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರ ನಿರ್ದೇಶನ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ .ಪ್ರಸನ್ನ ಅವರ ತಂಡ ಆರೋಪಿಗಳ ಬಂಧನದ ಕಾರ್ಯಚರಣೆ ನಡೆಸಿದ್ದು,

ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಸನ್ನ ಅವರ ತಂಡ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

- Advertisement -

Latest News

error: Content is protected !!