Tuesday, June 23, 2026
Homeಚಿಕ್ಕಮಗಳೂರುಚಿಕ್ಕಮಗಳೂರು : ಕೃಷ್ಣ ಮೃಗಗಳಿಗೆ ಗುಂಡಿಕ್ಕಿ ಹತ್ಯೆಗೈದ  ಬೇಟೆಗಾರರು

ಚಿಕ್ಕಮಗಳೂರು : ಕೃಷ್ಣ ಮೃಗಗಳಿಗೆ ಗುಂಡಿಕ್ಕಿ ಹತ್ಯೆಗೈದ  ಬೇಟೆಗಾರರು

- Advertisement -
- Advertisement -

ಚಿಕ್ಕಮಗಳೂರು : ಬೇಟೆಗಾರರು ತೀರಾ ಅಳಿವಿನಂಚಿನಲ್ಲಿರುವ ಕೃಷ್ಣ ಮೃಗಗಳಿಗೆ ಗುಂಡಿಕ್ಕಿ ಹತ್ಯೆಗೈದ  ಘಟನೆ ಕಡೂರು ತಾಲೂಕಿನ ಬಾಸೂರು ಕಾವಲ್ ನಲ್ಲಿ ನಡೆದಿದೆ. ಬೇಟೆಗಾರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಶೂಟ್ ಮಾಡಿ 2 ಹೆಣ್ಣು ಹಾಗೂ 1 ಗಂಡು ಕೃಷ್ಣಮೃಗವನ್ನು ಕೊಂದು ಹಾಕಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಪರಿಸರವಾದಿಗಳು ಆರೋಪಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಸಂಜೆಯೇ ಕೃಷ್ಣಮೃಗಗಳನ್ನ ಅಂತ್ಯ ಸಂಸ್ಕಾರ ಮಾಡಿದ್ದಾರೆ ಎಂಬ  ಆರೋಪ ಕೇಳಿ ಬಂದಿದೆ. ಸಂಜೆ ಬಳಿಕ ಅವಸರದಲ್ಲಿ ಅಂತ್ಯ ಸಂಸ್ಕಾರ ಕಾಡುವ ಆತುರವೆನಿತ್ತು?. ಸಂಜೆ ಬಳಿಕ ಪ್ರಾಣಿಗಳ ಶವಪರೀಕ್ಷೆ-ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಅಪರಾಧಿಗಳ ರಕ್ಷಣೆಗೆ ಆತುರದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಬೀರೂರು ವಲಯ ಅರಣ್ಯ ಇಲಾಖೆಯಲ್ಲಿ ಡಿ.23 ರಂದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!