Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಜಾತಿನಿಂದನೆ ಮಾಡಿ ವ್ಯಕ್ತಿಯ ಕೊಲೆಗೆ ಯತ್ನ; ನಾವೂರು ನೌಷದ್ ನನ್ನು ಬಂಧಿಸಿದ ಬೆಳ್ತಂಗಡಿ...

ಬೆಳ್ತಂಗಡಿ : ಜಾತಿನಿಂದನೆ ಮಾಡಿ ವ್ಯಕ್ತಿಯ ಕೊಲೆಗೆ ಯತ್ನ; ನಾವೂರು ನೌಷದ್ ನನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಹಳೆ ದ್ವೇಷದಿಂದ ಜಾತಿ ನಿಂದನೆ ಮಾಡಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಸಂಬಂಧ ಸಮಾಜ ಸೇವಕನ ಹೆಸರಲ್ಲಿ ಫೋಸ್ ನೀಡುತ್ತಿದ್ದ ಕ್ರಿಮಿನಲ್ ಆಂಬುಲೆನ್ಸ್ ಚಾಲಕ ನೌಷದ್ ನನ್ನು ಬಂಧಿಸಿ ಬೆಳ್ತಂಗಡಿ ಪೊಲೀಸರು ಜೈಲಿಗಟ್ಟಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿ ಸರಕಾರಿ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಡಿ.21 ರಂದು ರಾತ್ರಿ 9 ಗಂಟೆಗೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಇಂದಬೆಟ್ಟು ನಿವಾಸಿ ದಯಾನಂದ ಎಂಬವರು ತನ್ನ ಸ್ನೇಹಿತರಾದ ಆರೀಫ್ ಕಲ್ಲಾಜೆ,ಆಸೀಫ್ ಇಂದಬೆಟ್ಟು, ಸ್ವಾಲಿ ನಾವೂರ ಜೊತೆ ತೆರಳಿದ್ದು. ಸುಮಾರು ರಾತ್ರಿ 9:30 ರ ವೇಳೆಗೆ ಸ್ನೇಹಿತರಾದ ಆರೀಫ್ ಇದ್ದ ಸ್ಥಳಕ್ಕೆ ಆರೋಪಿ “Dildar” ಎಂಬ ಹೆಸರಿನ ಆಂಬುಲೆನ್ಸ್ ಚಾಲಕ ನಾವೂರು ನಿವಾಸಿ ನೌಷದ್ ಬಂದು ಕ್ಷುಲ್ಲಕ ವಿಚಾರದಲ್ಲಿ ಮಾತಿನ ಜಗಳವಾಡಿ ಕೈಯಿಂದ ಹಲ್ಲೆ ನಡೆಸಿದಾಗ ದಯಾನಂದ ರವರು ಜಗಳ ಬಿಡಿಸಿ ನೌಷದ್ ಗೆ ಬುದ್ದಿವಾದ ಹೇಳಿದಾಗ ದಯಾನಂದ ರವರಿಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿ ಬಳಿಕ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದಾನೆ. ಇದನ್ನು ದಯಾನಂದ ರವರು ಅಕ್ಷೇಪಿಸಿದಾಗ ಕೋಪಗೊಂಡ ನೌಷದ್ ಕೈಯಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉದ್ದೇಶದಿಂದ ಚುಚ್ಚಲು ಬಂದಾಗ ಎಡ ಕೈಯಿಂದ ತಡೆಯುವಾಗ  ದಯಾನಂದ ರವರ ಎಡಕೈಗೆ ಚೂರಿ ಚುಚ್ಚಿ ಗಾಯಗೊಂಡಿದ್ದು. ಬಳಿಕ ಸ್ನೇಹಿತರು ಸೇರಿ ದಯಾನಂದ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯುವತಿಗೆ ಮೆಸೇಜ್ ಮತ್ತು ಜಾತಿ ಬಗ್ಗೆ ತಮಾಷೆ ಮಾಡಿದ್ದ ನೌಷದ್: ಈ ಘಟನೆಗೆ ಸುಮಾರು 3 ವರ್ಷದಿಂದ ಆರೋಪಿ ನೌಷದ್ ದಯಾನಂದ ಅವರ ಸಮುದಾಯದ ಯುವತಿಗೆ ಮೆಸೇಜ್ ಮಾಡಿದ್ದ ವಿಚಾರದಲ್ಲಿ ದಯಾನಂದ ರವರು ಆರೋಪಿ ನೌಷದ್ ಗೆ ಬುದ್ದಿವಾದ ಹೇಳಿರುವುದು ಹಾಗೂ ಇತ್ತೀಚೆಗೆ ದಯಾನಂದ ರವರ ಜಾತಿಯ ಬಗ್ಗೆ ತಮಾಷೆ ಮಾಡಿರುವುದಕ್ಕೆ ಬುದ್ದಿವಾದ ಹೇಳಿರುವುದು ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಡಿ.22 ರಂದು ಗಾಯಗೊಂಡ ದಯಾನಂದ ನೀಡಿದ ದೂರಿನ ಮೇರೆಗೆ ತನಗೆ ಮತ್ತು ತನ್ನ ಸ್ನೇಹತ ಆರೀಫ್ ಗೆ ಆರೋಪಿ ನೌಷದ್ ಜಾತಿ ನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ನೌಷದ್ ವಿರುದ್ಧ BNS -2023 (u/s-115(2),118(1),109,351(2),352), SC&ST Act-2015(u/s-3(1),(r)(s)) ರಂತೆ ಪ್ರಕರಣ ದಾಖಲಿಸಿದ್ದರು.

ಆರೋಪಿ ಬಂಧನ: ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ತನಿಖೆ ನಡೆಸಿ ಆರೋಪಿ ಆಂಬುಲೆನ್ಸ್ ಚಾಲಕ ನೌಷದ್ ನನ್ನು ಡಿ.23 ರಂದು ಸಂಜೆ ಮಂಗಳೂರಿನಲ್ಲಿ ಬಂಧಿಸಿ ಮಂಗಳೂರು ಜಿಲ್ಲಾ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು. ನ್ಯಾಯಾಧೀಶರು ಆರೋಪಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ತನಗೆ ಹಲ್ಲೆ ಮಾಡಿರುವುದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ: ಘಟನೆ ನಡೆದ ಬಳಿಕ ತನ್ನ ಮೇಲೆ ಸುಮಾರು 8 ಮಂದಿ ಹಣದ ವಿಚಾರವಾಗಿ ಹಲ್ಲೆ ಮಾಡಿ ಬಳಿಕ ತಾನೇ ಆಂಬುಲೆನ್ಸ್ ವಾಹನಕ್ಕೆ ಕಲ್ಲು ಹಾಕಿ ಹಲ್ಲೆಗೊಳಗಾದವರಿಂದ ತಪ್ಪಿಸಿಕೊಂಡು ಬಂದಿರುವುದಾಗಿ “ಬಂಗೇರ ಬ್ರಿಗೇಡ್ ಇಂದಬೆಟ್ಟು ” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸಾರ್ವಜನಿಕರಿಗೆ ವಾಯ್ಸ್ ಮೆಸೇಜ್ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಬಂದು ದಾಖಲಾಗಿ ಬಳಿಕ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿ ನೌಷದ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದ ಎನ್ನಲಾಗಿದೆ.

ಮಾಜಿ ಶಾಸಕರ ಚಾಲಕನಾಗಿದ್ದ: ಆರೋಪಿ ನೌಷದ್ ಹಲವು ವರ್ಷಗಳ ಕಾಲ ದಿವಂಗತ ಮಾಜಿ ಶಾಸಕರೊಬ್ಬರ ಮತ್ತು ಅವರ ಕುಟುಂಬ ಸದಸ್ಯರ ವಾಹನಗಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ, ಮಹಿಳೆಗೆ ಕಿರುಕುಳ ಪ್ರಕರಣ ,ಅಕ್ರಮ ದನದ ಪ್ರಕರಣ ಸೇರಿದಂತೆ ಪ್ರಕರಣಗಳಿವೆ. ಇತ್ತೀಚೆಗಷ್ಟೇ ಬಾಡಿಗೆ ಆಂಬುಲೆನ್ಸ್ ನಲ್ಲಿ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿದ್ದ ಎನ್ನಲಾಗಿದೆ. ಈತ ಜನರಿಗೆ ಸಮಾಜ ಸೇವೆ ಮಾಡುವ ಹೆಸರಲ್ಲಿ  ಫೋಸ್ ನೀಡುತ್ತಿದ್ದ ಎನ್ನಲಾಗಿದೆ.

ಕಾರ್ಯಾಚರಣೆ: ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ ಮಠ ನೇತೃತ್ವದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಆನಂದ್.ಎಮ್ ಮತ್ತು ಸಿಬ್ಬಂದಿ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!