Monday, May 13, 2024
Homeತಾಜಾ ಸುದ್ದಿಬೀದಿನಾಯಿಗಳನ್ನು ಅಮಾನುಷವಾಗಿ ಕೊಲ್ಲುತ್ತಿರುವ ಪಾಪಿಗಳ ಹುಡುಕಾಟದಲ್ಲಿ ಕರ್ನಾಟಕ ಪೊಲೀಸರು

ಬೀದಿನಾಯಿಗಳನ್ನು ಅಮಾನುಷವಾಗಿ ಕೊಲ್ಲುತ್ತಿರುವ ಪಾಪಿಗಳ ಹುಡುಕಾಟದಲ್ಲಿ ಕರ್ನಾಟಕ ಪೊಲೀಸರು

spot_img
- Advertisement -
- Advertisement -

ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ಬೀದಿ ನಾಯಿ ಮರಿಗಳನ್ನು ಗುರಿಯಾಗಿಸಿಕೊಂಡು ಕೊಂದು ಹಾಕುತ್ತಿರುವ ಹಂತಕರಿಗಾಗಿ ಕರ್ನಾಟಕ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ, ವ್ಯಕ್ತಿಯ ಬಗ್ಗೆ ಸುಳಿವು ಪಡೆಯಲು ಸ್ಥಳೀಯರು, ಶ್ವಾನ ಪ್ರೇಮಿಗಳು, ಕಾರ್ಯಕರ್ತರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಸಂಬಂಧ ಖಾಸಗಿ ಕಂಪನಿ ಉದ್ಯೋಗಿ ಅನಿರುದ್ಧ ಬಿ.ಆರ್. ಎಂಬುವವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.

ಯಲಹಂಕ ನ್ಯೂ ಟೌನ್‌ನ ಶಾಮರಾಜಪುರ ಬಳಿಯ ಖಾಸಗಿ ಅಪಾರ್ಟ್‌ಮೆಂಟ್ ಎದುರಿನ ಮರದಲ್ಲಿ ನೇತಾಡುತ್ತಿದ್ದ ನಾಯಿ ಮರಿಯ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ವಾರ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ಮೂರು ಬೀದಿ ನಾಯಿ ಮರಿಗಳನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿತ್ತು. ಯಲಹಂಕದ ನಿರ್ಮಾಣ ಹಂತದ ಕಟ್ಟಡದ ಬಳಿ ದುಷ್ಕರ್ಮಿಗಳು ಮೂರು ನಾಯಿಮರಿಗಳನ್ನು ಸುಟ್ಟು ಹಾಕಿದ್ದರು.

ಅರ್ಧ ಸುಟ್ಟ ನಾಯಿ ಮರಿಗಳ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರೊಬ್ಬರು ದೂರು ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಎರಡೂ ಕೃತ್ಯಗಳು ಒಂದೇ ವ್ಯಕ್ತಿಯ ಕೈವಾಡವಿದೆ.

ಈ ಘಟನೆಗಳು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿರುವುದರಿಂದ, ಅಪರಾಧಿಯನ್ನು ಪತ್ತೆಹಚ್ಚುವುದು ಅಥವಾ ಮಾಹಿತಿ ಸಂಗ್ರಹಿಸುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಆದಾಗ್ಯೂ, ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಮತ್ತು ಐಪಿಸಿ ಸೆಕ್ಷನ್ 428 ರ ಅಡಿಯಲ್ಲಿ ಪ್ರಾಣಿಗಳನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ದುಷ್ಕೃತ್ಯ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ನಾಯಿ ಮರಿ ಹತ್ಯೆ ಮಾಡಿದವರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!