Friday, June 26, 2026
Homeಕರಾವಳಿಉಡುಪಿಉಳ್ಳಾಲ ಭಾರತ್ ಕಾಲೇಜನಲ್ಲಿ ಹಿಜಾಬ್ ವಿವಾದ: ಕಾಲೇಜಿಗೆ ರಜೆ ಘೋಷಣೆ

ಉಳ್ಳಾಲ ಭಾರತ್ ಕಾಲೇಜನಲ್ಲಿ ಹಿಜಾಬ್ ವಿವಾದ: ಕಾಲೇಜಿಗೆ ರಜೆ ಘೋಷಣೆ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಭಾರತ್ ಕಾಲೇಜಿನಲ್ಲಿ ಹಿಜಾಬ್ ವಿವಾದ ತಲೆದೋರಿದೆ. ಮಂಗಳೂರು ಹೊರವಲಯದ ಉಳ್ಳಾಲದಲ್ಲಿರುವ ಭಾರತ್ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ಕಾರಣಕ್ಕೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದೆ.

ನಿನ್ನೆಯೇ ಕೋರ್ಟ್ ಆದೇಶ ಪಾಲಿಸಲು ಕಾಲೇಜು ಆಡಳಿತ ಮಂಡಳಿ ಸೂಚಿಸಿದ್ದರೂ ಅದನ್ನು ಧಿಕ್ಕರಿಸಿ ಇಂದು ಮತ್ತೆ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಬಂದಿದ್ದರು ಎನ್ನಲಾಗಿದೆ. ಹೀಗಾಗಿ ಇಂದು ತರಗತಿ ಪ್ರವೇಶ ನಿರಾಕರಿಸಿದ ಕಾರಣ ಕಾಲೇಜಿನ ಹೊರಗೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದ್ದು ಆಡಳಿತ ಮಂಡಳಿ ಮತ್ತು ಪೋಷಕರ ಸಭೆ ನಡೆಸಲಾಗಿದೆ.

- Advertisement -

Latest News

error: Content is protected !!