Tuesday, May 14, 2024
Homeತಾಜಾ ಸುದ್ದಿಮಂಗಳೂರಿನ "ಪಿಲಿಕುಳ ಝೂ" ನಲ್ಲಿ ಮರಿ ಪ್ರಾಣಿಗಳ ಕಲರವ

ಮಂಗಳೂರಿನ “ಪಿಲಿಕುಳ ಝೂ” ನಲ್ಲಿ ಮರಿ ಪ್ರಾಣಿಗಳ ಕಲರವ

spot_img
- Advertisement -
- Advertisement -

ಮಂಗಳೂರು_ದಕ್ಷಿಣ ಕರ್ನಾಟಕದ ದೊಡ್ಡ ಝೂಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಲಾಕ್‌ಡೌನ್ ಹಿನ್ನಲೆಯಲ್ಲಿ ಪಾರ್ಕ್, ಝೂಗಳಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಜನರು ಉದ್ಯಾನವನಗಳಿಗೆ ಬರದಿದ್ದರೂ, ಝೂಗಳಲ್ಲಿ ಮಾತ್ರ ಪ್ರಾಣಿಗಳ ಕಲರವ ಜೋರಾಗಿದೆ.ಮಂಗಳೂರಿನ ಪಿಲಿಕುಳ ಝೂನಲ್ಲಿ ಪ್ರಾಣಿಗಳ ಸಂತಾನೋತ್ಪತ್ತಿಗಿದೆ. ಪಿಲಿಕುಳದ ಹುಲಿ ‘ರಾಣಿ’ ಮೂರು ಮರಿಗಳಿಗೆ ಜನ್ಮ ನೀಡಿದೆ.

ಈ ಕರೋನ ಲಾಕ್ ಡೌನ್ ಸಮಯದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಇನ್ನು 16 ದಿನಗಳಲ್ಲಿ ಮರಿಗಳು ಕಣ್ಣು ತೆರೆಯಲಿದೆ. ಮೂರು ಮರಿಗಳನ್ನು ಸೇರಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಇನ್ನು ಪಿಲಿಕುಳದಲ್ಲಿ ಕಾಡುನಾಯಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ ಬೋಳ್ ಎಂಬ ಕಾಡುನಾಯಿ ಈಗ ಏಳು ಮರಿಗಳಿಗೆ ಜನ್ಮ ನೀಡಿದೆ. ಬೋಳ್ ನಾಯಿ ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ನಾಯಿ 10 ಮರಿಗಳಿಗೆ ಜನ್ಮ‌ನೀಡಿತ್ತು. ಪಿಲಿಕುಳ ಮೃಗಾಲಯದಲ್ಲಿ ಕಾಡುನಾಯಿಗಳ ಸಂಖ್ಯೆ ಸದ್ಯ 33ಕ್ಕೇರಿದೆ.
ಪಿಲಿಕುಳದಲ್ಲಿ ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ರಿಯಾ ಎಂಬ ಪಕ್ಷಿ ಸಂಕುಲವೂ ವೃದ್ಧಿಯಾಗುತ್ತಿದೆ. ಆ ಮೊಟ್ಟೆಗಳಿಗೆ ಕೃತಕ ಕಾವು ನೀಡಲಾಗುತ್ತಿದ್ದು, ಒಂದು‌ ಬಿಳಿ ರಿಯಾ ಜನ್ಮ ತಾಳಿದೆ. ಎರಡು ಬಿಳಿ ಮತ್ತು ಎರಡು ಕಂದು ರಿಯಾಗಳನ್ನು ಈ ಹಿಂದೆ ಕೇರಳದ ತಿರುವನಂತಪುರಂನಿಂದ ಪ್ರಾಣಿ ವಿನಿಮಯದಡಿ ತರಲಾಗಿತ್ತು.
ಇನ್ನು ಅಪರೂಪದ ರೆಟಿಕ್ಯುಲೇಟೆಡ್ ಹೆಬ್ಬಾವು 20 ಮೊಟ್ಟೆಗಳಿಗೆ ಕಾವು ನೀಡುತ್ತಿದ್ದು, ಕಳೆದ ಬಾರಿ 17ಮರಿಗಳಿಗೆ ಜನ್ಮ ನೀಡಿತ್ತು. ಇದೇ ರೀತಿ ಪಿಲಿಕುಳದ ನಾಗಮಣಿ ಎಂಬ ಹೆಸರಿನ ಕಾಳಿಂಗಸರ್ಪವೂ ಆರು ಮೊಟ್ಟೆಗಳನ್ನು ಇಟ್ಟಿದ್ದು,ಅವುಗಳಿಗೆ ಕೃತಕ ಕಾವು ನೀಡಲಾಗುತ್ತಿದೆ.

- Advertisement -
spot_img

Latest News

error: Content is protected !!