ಮಂಗಳೂರು: ಕರಾವಳಿ ತಿನಿಸುಗಳು ಅಂದಾಕ್ಷಣ ಫಟ್ ಅಂತಾ ನೆನಪಾಗೋದು ಗೋಲಿಬಜೆ, ನೀರುಳ್ಳಿ ಬಜೆ, ಬನ್ಸ್, ನೀರುದೋಸೆ, ಕಲ್ತಪ್ಪ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲೂ ಸಂಜೆಯ ಟೀಗೆ ಬೆಸ್ಟ್ ಕಾಂಬಿನೇಷನ್ ಗಳಲ್ಲಿ ಒಂದು ನೀರುಳ್ಳಿ ಬಜೆ. ಅಡುಗೆ ಬಾರದವರು ಕೂಡ ಇದನ್ನು ಸುಲಭವಾಗಿ ಮಾಡಬಹುದು.
ಈ ನೀರುಳ್ಳಿ ಬಜೆ ಹೇಗೆ ಮಾಡುವುದು ಎನ್ನುವುದನ್ನು ನಾವಿತ್ತು ನಿಮಗೆ ಹೇಳಿಕೊಡ್ತೀವಿ.
ಬೇಕಾಗುವ ಸಾಮಾಗ್ರಿಗಳು
ಕಡ್ಲೆ ಹಿಟ್ಟು- 6 ರಿಂದ 7 ಟೇಬಲ್ ಸ್ಪೂನ್ ( ಕಾಲು ಕಪ್)
ಈರುಳ್ಳಿ- 2 ( ಮಧ್ಯಮ ಗಾತ್ರದ್ದು)
ಇಂಗು( ಚಿಟಿಕೆಯಷ್ಟು)
ಮೆಣಸಿನ ಹುಡಿ(ಖಾರದ ಪುಡಿ)- 1 ಟೇಬಲ್ ಸ್ಪೂನ್
ಉಪ್ಪು(ರುಚಿಗೆ ತಕ್ಕಷ್ಟು)
ಕರಿಯಲು ಎಣ್ಣೆ
ಮಾಡುವ ವಿಧಾನ
ಮೊದಲು ಈರುಳ್ಳಿಯನ್ನು ತೆಳ್ಳಗೆ ಹಚ್ಚಿಕೊಳ್ಳಬೇಕು. ಬಳಿಕ ಒಂದು ಪಾತ್ರೆಗೆ ಕಡ್ಲೆ ಹಿಟ್ಟು, ಮೆಣಸಿನ ಹುಡಿ, ಉಪ್ಪು, ಇಂಗು ಹಾಕಿ ಅದಕ್ಕೆ ಅಳತೆ ನೋಡಿಕೊಂಡು ಹಾಕಿಕೊಳ್ಳಬೇಕು. ಈ ಮಿಶ್ರಣ ತುಂಬಾ ನೀರಾಗದಂತೆ ನೋಡಿಕೊಳ್ಳಬೇಕು. ಬಳಿಕ ಹಚ್ಚಿದ ಈರುಳ್ಳಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಈರುಳ್ಳಿ ಬಜೆಯನ್ನು ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕಬೇಕು. ಗೋಲ್ಡನ್ ಬಣ್ಣಕ್ಕೆ ತಿರುಗಿದಾಗ ಅದನ್ನು ತೆಗೆಯಬೇಕು. ಸಂಜೆಯ ತಿಂಡಿಗೆ ಇಂದು ತುಂಬಾನೇ ಚೆನ್ನಾಗಿರುತ್ತದೆ. ಹಾಗಾದ್ರೆ ತಡ ಯಾಕೆ ನೀವು ಕೂಡ ಈ ಸಿಂಪಲ್ ರೆಸಿಪಿಯನ್ನು ಟ್ರೈ ಮಾಡಿ.
ಇನ್ನು ಹೊಸ ಹೊಸ, ಅದರಲ್ಲೂ ಕರಾವಳಿಯ ರೆಸಿಪಿಗಳಿಗಾಗಿ ನವ್ಯಾಸ್ ನೇಚರ್ ಸ್ಟುಡಿಯೋ ಯೂ ಟ್ಯೂಬ್ ಚಾನೆಲ್ ನ ಸಬ್ ಸ್ಕ್ರೈಬ್ ಮಾಡಿ.


