Monday, June 8, 2026
Homeಕರಾವಳಿಉಡುಪಿಉಡುಪಿ: ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು; ಮನೆ ಕೆಲಸದಾಕೆಯಿಂದ ಕೃತ್ಯ‌‌ ಶಂಕೆ

ಉಡುಪಿ: ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವು; ಮನೆ ಕೆಲಸದಾಕೆಯಿಂದ ಕೃತ್ಯ‌‌ ಶಂಕೆ

- Advertisement -
- Advertisement -

ಉಡುಪಿ: ಮನೆಯ ಕಾಪಾಟಿನಲ್ಲಿದ್ದ ಚಿನ್ನಾಭರಣ ಕಳವಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಮನೆ ಕೆಲಸದಾಕೆ ಮೇಲೆ ಶಂಕೆ ವ್ಯಕ್ತಪಡಿಸಿ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನರಸಿಂಹ ಗಾಣಿಗ ಎಂಬವರ ಮನೆಯಲ್ಲಿ ಉಡುಪಿ ಕೊರಂಗ್ರಪಾಡಿಯ ಮಂಜುಳಾ(21) ಎಂಬಾಕೆ ಮನೆಕೆಲಸ ಮಾಡುತ್ತಿದ್ದು, ಮೇ 25ರಂದು ಮಂಜುಳಾ ತನ್ನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಾಸ್ಸು ಬಂದಿರುವುದಿಲ್ಲ

ಮೇ 27ರಂದು ಮನೆಯ ಕಾಪಾಟು ನೋಡಿದಾಗ 28 ಗ್ರಾಂ ತೂಕದ 2 ಚಿನ್ನದ ಬಳೆ ನಾಪತ್ತೆಯಾಗಿರುವುದು ಕಂಡುಬಂದಿದೆ. ಮನೆ ಕೆಲಸದಾಕೆ ಮಂಜುಳಾಳನ್ನು ವಿಚಾರಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಇದೀಗ ಈ ಚಿನ್ನದ ಬಳೆಗಳನ್ನು ಮಂಜುಳಾ ಕಳವು ಮಾಡಿದ್ದು, ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು‌ ನೀಡಿದ್ದಾರೆ. ಕಳವಾದ ಚಿನ್ನದ ಬಳೆಗಳ ಒಟ್ಟು ಮೌಲ್ಯ ಸುಮಾರು 1,10,000 ರೂ. ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!