Friday, June 5, 2026
Homeಕರಾವಳಿಬೆಳ್ತಂಗಡಿ : ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ನಗ-ನಗದು...

ಬೆಳ್ತಂಗಡಿ : ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

- Advertisement -
- Advertisement -

ಬೆಳ್ತಂಗಡಿ;  ಯಾರು ಇಲ್ಲದ ವೇಳೆ  ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಸುಂಕದಕಟ್ಟೆಯ ನಿವಾಸಿ ಫೌಜಿಯಾ ಅವರು ರಾತ್ರಿ ಹತ್ತಿರದ ಸಹೋದರನ ಮನೆಗೆ ಹೋಗಿದ್ದರು.  ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ಬಳಿಕ ನೋಡಿದಾಗ ಕಳ್ಳರು ಬೀಗ ಮುರಿದು ಮನೆಯ ಬೆಡ್ ರೂಂನಲ್ಲಿದ್ದ  ಕಪಾಟನ್ನು  ತೆರದು ಅದರಲ್ಲಿದ್ದ  ಸುಮಾರು ಎರಡೂವರೆ ಪವನ್ ತೂಕದ 2 ಚಿನ್ನದ ಸರ, 1  ಪವನ್ ತೂಕದ 2 ಜತೆ ಕಿವಿಯೋಲೆಗಳು, ಸುಮಾರು ಎರಡೂವರೆ ಪವನ್ ತೂಕದ 2 ಬ್ರಾಸ್‌ಲೈಟ್ ಸೇರಿದಂತೆ ರೂ. 25 ಸಾವಿರ ನಗದನು ದೋಚಿದ್ದಾರೆ.

ನಗ-ನಗದು ಸೇರಿದಂತೆ ಕಳವಾದ ಒಟ್ಟು ಮೌಲ್ಯ ರೂ. 2,97000 ಎಂದು ಅಂದಾಜಿಸಲಾಗಿದ್ದು. ವೇಣೂರು ಪೊಲೀಸ್ ಉಪ ನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!