- Advertisement -
- Advertisement -
ಉಡುಪಿ; ಹೋಟೆಲ್ ಮಾಲೀಕ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲೀಕ, ಉಡುಪಿ ಹರಿಶ್ಚಂದ್ರ ಮಾರ್ಗ ನಿವಾಸಿ ಅಜಿತ್ ಕುಮಾರ್ ನಾಪತ್ತೆಯಾದವರು.
ಏಪ್ರಿಲ್ 12 ರಂದು ಅಜಿತ್ ಕುಮಾರ್ ಸಂಜೆ ಹೊಟೇಲಿನ ತಿಂಡಿಯನ್ನು ಪಾರ್ಸೆಲ್ ಕೊಡಲು ಅವರ ಸ್ಕೂಟರ್‌ನಲ್ಲಿ ಹೋದವರು ಹೋಟೆಲ್‌ಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -